Connect with us

    LATEST NEWS

    ಮಂಗಳೂರು ವಿವಿ ಕಾಲೇಜ್ – ಹಿಜಬ್ ಧರಿಸಿ ಬಂದ ವಿಧ್ಯಾರ್ಥಿನಿಯರಿಗೆ ತರಗತಿ ಪ್ರವೇಶಕ್ಕೆ ನಿರಾಕರಣೆ

    ಮಂಗಳೂರು ಮೇ 28: ಮಂಗಳೂರು ವಿವಿ ಕಾಲೇಜಿಗೆ ಹಿಜಬ್ ಧರಿಸಿ ಬಂದ ವಿಧ್ಯಾರ್ಥಿನಿಯರಿಗೆ ತರಗತಿ ಪ್ರವೇಶಕ್ಕೆ ಕಾಲೇಜಿನ ಪ್ರಾಂಶುಪಾಲೆ ನಿರಾಕರಿಸಿದ್ದಾರೆ.


    ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಹಿಜಬ್ ಗಲಾಟೆ ಮತ್ತೆ ಮುಂದುವರೆದಿದ್ದು, ಈಗಾಗಲೇ ಹೈಕೋರ್ಟ್ ಆದೇಶದ ಅನ್ವಯ ಶಾಲಾ ಕಾಲೇಜುಗಳಲ್ಲಿ ತರಗತಿಯಲ್ಲಿ ಹಿಜಬ್ ನಿಷೇಧಿಸಲಾಗಿದೆ. ಈ ಹಿನ್ನಲೆ ಮಂಗಳೂರು ವಿವಿ ಕಾಲೇಜಿನಲ್ಲೂ ಹಿಜಬ್ ಸಂಪೂರ್ಣ ನಿಷೇಧಿಸಲಾಗಿದೆ. ಆದರೂ ಕಾಲೇಜಿಗೆ 12 ಮಂದಿ ವಿಧ್ಯಾರ್ಥಿನಿಯರು ಹಿಬಬ್ ಧರಿಸಿ ಬಂದಿದ್ದರು.


    ಆದರೆ ಕಾಲೇಜಿನ ಪ್ರಾಂಶಪಾಲೆ ಡಾ. ಅನಸೂಯ ರೈ ಅವರು ವಿಧ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶಿಸದಂತೆ ತಡೆದಿದ್ದಾರೆ. ಬಳಿಕ ವಿಧ್ಯಾರ್ಥಿನಿಯರು ಕಾಲೇಜು ಗ್ರಂಥಾಲಯಕ್ಕೆ ತೆರಳಿದ್ದಾರೆ. ಆದರೆ ಅಲ್ಲಿ ವಿಧ್ಯಾರ್ಥಿನಿಯರನ್ನು ತಡೆದು ಪ್ರಾಂಶುಪಾಲೆ ಬುದ್ದಿ ಹೇಳಿದ್ದಾರೆ. ಆದರೆ ಪಟ್ಟು ಬಿಡದ ವಿಧ್ಯಾರ್ಥಿನಿ.ರು ಕಾಲೇಜು ಲೈಬ್ರೆರಿ ಎದುರು ನಿಂತಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply