ಕುಂದಾಪುರ ಹೆಮ್ಮಾಡಿಯಲ್ಲಿ ಹೈವೇ ಪೆಟ್ರೋಲ್ ಪೊಲೀಸರ ಹಣ ವಸೂಲಿ ವಿಡಿಯೋ ವೈರಲ್

ಉಡುಪಿ ಜನವರಿ 24: ಕುಂದಾಪುರ ಹೆಮ್ಮಾಡಿಯಲ್ಲಿ ಹೈವೇ ಪೆಟ್ರೋಲ್ ಪೊಲೀಸರು ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ನಿಂತು ಕಾರು ಚಲಾಯಿಸಿಕೊಂಡು ಬರುತ್ತಿದ್ದ ಮಹಿಳೆಯನ್ನು ಪೊಲೀಸರು ಅಡ್ಡ ಹಾಕಿದ್ದಾರೆ. ಪೊಲೀಸರು ದೂರದಿಂದಲೇ ಕಾರು ನಿಲ್ಲಿಸುವಂತೆ ಸೂಚಿಸಿ ದಾಖಲೆ ಕೇಳಿದ್ದು, ದಾಖಲೆ ನೀಡಿದ ಬಳಿಕ ನಂತರ ಮಹಿಳೆ ಕಾರು ಚಲಾಯಿಸುವಾಗ ಸೀಟು ಬೆಲ್ಟ್ ಹಾಕಿದ್ದರು ಕೂಡ 500 ರೂಪಾಯಿ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. ಈಗಾಗಲೇ ಈ ಭಾಗದಲ್ಲಿ ಈ ಹಿಂದೆ ಕೂಡ ಹೈವೇ ಪೆಟ್ರೋಲ್ ಪೊಲೀಸರು ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರು ಆರೋಪ ಮಾಡಿದ್ದರು.

Facebook Comments

comments