ಅಕ್ಟೋಬರ್ 31ರ ಒಳಗೆ ಮಂಗಳೂರು ಮಹಾನಗರಪಾಲಿಕೆ ಚುನಾವಣೆ ನಡೆಸಿ – ರಾಜ್ಯ ಹೈಕೋರ್ಟ್ ಸೂಚನೆ

ಮಂಗಳೂರು ಅಗಸ್ಟ್ 28: ಲೋಕಸಭಾ ಚುನಾವಣೆ ಸಂದರ್ಭ ಬರ್ಕಾಸ್ತುಗೊಂಡಿದ್ದ ಮಂಗಳೂರು ಮಹಾನಗರಪಾಲಿಕೆ ಗೆ ಕೊನೆಗೂ ಚುನಾವಣೆ ನಡೆಸಲು ರಾಜ್ಯ ಹೈಕೋರ್ಟ್ ಆದೇಶ ನೀಡಿದ್ದು ಅಕ್ಟೋಬರ್ 31ರ ಒಳಗೆ ಚುನಾವಣೆ ಮುಗಿಸಲು ಸೂಚನೆ ನೀಡಿದೆ.

ಮಂಗಳೂರು ಮಹಾನಗರಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲದೆ ಕೆಲವು ತಿಂಗಳುಗಳೇ ಕಳೆದಿದೆ. ಲೋಕಸಭಾ ಚುನಾವಣಾ ಸಂದರ್ಭ ಮಹಾನಗರ ಪಾಲಿಕೆ ಆಡಳಿತವನ್ನು ಬರ್ಕಾಸ್ತುಗೊಳಿಸಿ ಜಿಲ್ಲಾಧಿಕಾರಿಗಳು ಆಡಳಿತವನ್ನು ವಹಿಸಿಕೊಂಡಿದ್ದರು. ಇದರಿಂದ ಯಾವುದೇ ಜನಪ್ರತಿನಿಧಿಗಳು ಇಲ್ಲದೆ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು, ದುರಸ್ತಿ ಕಾರ್ಯಗಳೂ ನಡೆಯದೆ ನನೆಗುದಿಗೆ ಬಿದ್ದಿತ್ತು.

ಈ ಹಿನ್ನಲೆಯಲ್ಲಿ ಶೀಘ್ರ ಚುನಾವಣೆ ನಡೆಸಬೇಕೆಂದು ಕೋರಿ ಮಂಗಳೂರಿನ ಅಬ್ದುಲ್ ಫಾರೂಕ್ ಮತ್ತು ಇತರರು ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿದ್ದರು. ಇದೀಗ ಕೊನೆಗೂ ಮದ್ಯಪ್ರವೇಶ ಮಾಡಿದ ಹೈಕೋರ್ಟ್ ಅಕ್ಟೋಬರ್ 31 ರೊಳಗೆ ಚುನಾವಣೆ ನಡೆಸಿ ನವೆಂಬರ್ 5 ರವೊಳಗೆ ಫಲಿತಾಂಶ ಘೋಷಣೆ ಮಾಡಬೇಕೆಂದು ರಾಜ್ಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.

Facebook Comments

comments