ಬೆಳ್ತಂಗಡಿ, ಮಾರ್ಚ್ 28: ಭಾರೀ ಭಾರೀ ಗಾಳಿ – ಮಳೆಗೆ ಕೋಳಿ ಫಾರಂ ಸಂಪೂರ್ಣ ನೆಲಸಮವಾದ ಘಟನೆ ಬೆಳ್ತಂಗಡಿ ತಾಲೂಕಿನ ಬದ್ಯಾರು ಸಮೀಪದ ಪೆರ್ನಮಂಜ ಎಂಬಲ್ಲಿ ನಡೆದಿದೆ.

ಪೆರ್ನಮಂಜ ನಿವಾಸಿಯಾಗಿರುವ ತುಂಗಮ್ಮ ಶೆಟ್ಟಿಯವರಿಗೆ ಸೇರಿದ 3600 ಸ್ಕೇರ್ ಫೀಟ್ ನಲ್ಲಿದ್ದ ಕೋಳಿ ಫಾರಂ ಸಂಪೂರ್ಣ ನೆಲಸಮವಾಗಿದೆ. ಶೆಡ್ ನಲ್ಲಿ 2,900 ಕೋಳಿಗಳಿದ್ದು ಸುಮಾರು ಕೋಳಿಗಳು ಸತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.