Connect with us

LATEST NEWS

ಉಡುಪಿಯಲ್ಲಿ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ

ಉಡುಪಿ, ಮೇ 25 : ಉಡುಪಿಯಲ್ಲಿ ಇಂದು ಭಾರಿ ಮಳೆಯಾಗಿದ್ದು, ಅರ್ಧ ತಾಸಿನ ಜಡಿಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಇಂದು ಬೆಳಿಗ್ಗೆ ಸುರಿದ ಮಳೆಯಿಂದಾಗಿ ಅಗತ್ಯ ವಸ್ತುಗಳನ್ನು ಖರೀದಿಸಲು ಬಂದ ಜನರು ಸಾಕಷ್ಟು ಪರದಾಡಬೇಕಾಯಿತು. ವಾಹನ ಸವಾರರು, ಪಾದಚಾರಿಗಳಿಗೂ ಮಳೆ ಸಾಕಷ್ಟು ಕಾಟ ಕೊಟ್ಟಿತು.

ಮಳೆ ಕೆಲವೇ ನಿಮಿಷಗಳಲ್ಲಿ ನಿಂತರೂ ಉಡುಪಿ ನಗರ ಸಂಪೂರ್ಣ ಸ್ತಬ್ಧವಾಯಿತು. ಜನರು 10 ಗಂಟೆ ಒಳಗಡೆ ಅಗತ್ಯ ವಸ್ತುಗಳನ್ನು ಖರೀದಿಸಿ ಮನೆಗೆ ತಲುಪಲು ಸಾಕಷ್ಟು ಪರದಾಡಬೇಕಾದ ಪ್ರಸಂಗ ನಡೆಯಿತು.

Video: