LATEST NEWS
ವಾಯುಭಾರ ಕುಸಿತ ಉಡುಪಿಯಲ್ಲಿ ಭಾರಿ ಮಳೆ…!!
ವಾಯುಭಾರ ಕುಸಿತ ಉಡುಪಿಯಲ್ಲಿ ಭಾರಿ ಮಳೆ…!!
ಉಡುಪಿ ಮೇ.14: ಉಡುಪಿ ಜಿಲ್ಲೆಯಲ್ಲಿ ಇಂದು ಸಂಜೆ ಧಾರಾಕಾರ ಮಳೆ ಸುರಿದಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರಾವಳಿಯಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆಯನ್ನು ಹವಮಾನ ಇಲಾಖೆ ಈಗಾಗಲೇ ನೀಡಿದೆ.
ಈ ಹಿನ್ನಲೆ ಇಂದು ಸಂಜೆಯಿಂದಲೇ ಉಡುಪಿ, ಬ್ರಹ್ಮಾವರ ಹಾಗೂ ಕಾರ್ಕಳ ತಾಲೂಕಿನಾಧ್ಯಂತ ಭಾರೀ ಮಳೆ ಸುರಿದಿದೆ. ಕಾರ್ಕಳ ತಾಲೂಕಿನ ಅಜೆಕಾರು, ಶಿರ್ಲಾಲು, ಕೆರ್ವಾಶೆ, ಬಜಗೋಳಿ ಪರಿಸರದಲ್ಲಿ ಗುಡುಗು ಸಹಿತ ಮಳೆ, ಇನ್ನು ಉಡುಪಿ ನಗರದಲ್ಲೂ ಗುಡುಗು ಸಹಿತ ಮಳೆಯಾಗುತ್ತಿದ್ದು, ರಾತ್ರಿಯಿಡೀ ಮಳೆ ಮುಂದುವರೆಯುವ ಸಾಧ್ಯತೆ ಇದೆ ಅಂದಾಜಿಸಲಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದೆ.
You must be logged in to post a comment Login