ಮಂಗಳೂರು ಭಾರಿ ಮಳೆ ಹಿನ್ನಲೆ ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ

ಮಂಗಳೂರು ಅಗಸ್ಟ್ 9: ಮಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನಲೆ ಮಂಗಳೂರಿನಿಂದ ಹೊರಡುವ ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಮಹಾಮಳೆ ಮುಂದುವರೆದಿದ್ದು , ಇಂದು ಕೂಡ ಭಾರಿ ಗಾಳಿಯಿಂದ ಕೂಡಿದ ಮಳೆ ಸುರಿಯುತ್ತಿದೆ. ಈ ಹಿನ್ನಲೆಯಲ್ಲಿ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಕೆಲ ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.

ಮಂಗಳೂರಿನಿಂದ ಹೊರಡುವ ಏರ್ ಇಂಡಿಯಾ ಎಕ್ಸ್‌ಪ್ರೆಸ್​ನ ಆರು ವಿಮಾನಗಳ ಸಮಯ ಬದಲಾವಣೆ ‌ಮಾಡಲಾಗಿದೆ. ನಿನ್ನೆ ರಾತ್ರಿ 8.40ಕ್ಕೆ ಅಬುದಾಬಿಗೆ ಹೊರಡಬೇಕಿದ್ದ ವಿಮಾನ ಇಂದು ಬೆಳಗ್ಗೆ 6.15ಕ್ಕೆ, ಇಂದು ಬೆಳಗ್ಗೆ 6.35 ಕ್ಕೆ ಬಹರೈನ್​ಗೆ ಹೊರಡಬೇಕಿದ್ದ ವಿಮಾನ ಬೆಳಗ್ಗೆ 9.35 ಕ್ಕೆ, ಇಂದು ಬೆಳಗ್ಗೆ 9.10 ಕ್ಕೆ ದುಬೈಗೆ ಹೊರಡಬೇಕಿದ್ದ ವಿಮಾನ ಮಧ್ಯಾಹ್ನ 3.15 ಕ್ಕೆ, ಸಂಜೆ 5.35 ಕ್ಕೆ ದೋಹಾಗೆ ತೆರಳಬೇಕಿದ್ದ ವಿಮಾನ ಸಂಜೆ 6.35 ಕ್ಕೆ, ರಾತ್ರಿ 8.05 ಕ್ಕೆ ದುಬೈಗೆ ತೆರಳಬೇಕಿದ್ದ ವಿಮಾನ 10.25 ಕ್ಕೆ, ಸಂಜೆ 7.25 ಕ್ಕೆ ದಮಾಮ್‌ಗೆ ಹೊರಡಬೇಕಿದ್ದ ವಿಮಾನ ರಾತ್ರಿ 12.20ಕ್ಕೆ ಹೊರಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Facebook Comments

comments