LATEST NEWS
ಉಳ್ಳಾಲ – ಭಾರೀ ಮಳೆಗೆ ಕುಸಿದು ಬಿದ್ದ ಬಡ ಮಹಿಳೆಯರಿಬ್ಬರು ಇದ್ದ ಮನೆ
ಉಳ್ಳಾಲ ಜುಲೈ 05 : ಭಾರೀ ಗಾಳಿ ಮಳೆಗೆ ಮಹಿಳೆಯರಿಬ್ಬರು ವಾಸವಿದ್ದ ಮನೆ ಕುಸಿದು ಬಿದ್ದ ಘಟನೆ ನಡೆದಿದ್ದು, ಮನೆ ದುರಸ್ಥ ಕಾರ್ಯದಲ್ಲಿದ್ದ ಕಾರಣ ಸಂಭಾವ್ಯ ಅನಾಹುತ ತಪ್ಪಿದೆ.
ಸೋಮೇಶ್ವರದ ಉಳ್ಳಾಲ ರೈಲ್ವೆ ನಿಲ್ದಾಣದ ಹಿಂಬದಿಯ ಶೋಭಾ ಅವರ ಮನೆ ನಿನ್ನೆ ರಾತ್ರಿ ಸುರಿದ ಗಾಳಿ- ಮಳೆಗೆ ಧರೆಗೆ ಉರುಳಿದೆ. ಶೋಭಾ ಅವರ ಪತಿ ಕೆಲ ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟ ಮೇಲೆ ಅವರು ಸಹೋದರ ವಸಂತ್ ಮತ್ತು ಆತನ ಪತ್ನಿ ಹೇಮಾ ಜೊತೆ ವಾಸವಿದ್ದರು. ವರ್ಷದ ಹಿಂದೆ ಶೋಭಾ ಅವರ ಸಹೋದರ ವಸಂತ್ ಅವರು ನೀರಿಗೆ ಬಿದ್ದು ಆಕಸ್ಮಿಕವಾಗಿ ಮೃತ ಪಟ್ಟಿದ್ದರು.
ಶೋಭಾ ಮತ್ತು ಹೇಮಾ ಅವರು ಮಗನ ಜತೆ ಶಿಥಿಲವಾಗಿದ್ದ ಮನೆಯಲ್ಲಿ ಅನಿವಾರ್ಯವಾಗಿ ವಾಸವಿದ್ದರು. ಈ ಬಡ ಕುಟುಂಬಕ್ಕೆ ಮಾನವೀಯತೆ ತೋರಿ ಸ್ಥಳೀಯ ರಕ್ತೇಶ್ವರಿ ಬಳಗದವರು ಮನೆಯ ದುರಸ್ತಿ ಕಾರ್ಯ ನಡೆಸಲು ಅವರನ್ನು ಹತ್ತಿರದ ಮನೆಯೊಂದಕ್ಕೆ ಸ್ಥಳಾಂತರಿಸಿದ್ದರು. ಬಡ ಕುಟುಂಬಕ್ಕೆ ಸುಸಜ್ಜಿತ ಮನೆ ನಿರ್ಮಿಸಿಕೊಡಲು ರಕ್ತೇಶ್ವರಿ ಬಳಗದ ಸದಸ್ಯರು ಮುಂದಾಗಿದ್ದು ಕುಟುಂಬಕ್ಕೆ ಸರ್ಕಾರ ಮತ್ತು ದಾನಿಗಳ ಸಹಕಾರ ಯಾಚಿಸಿದ್ದಾರೆ
You must be logged in to post a comment Login