ಮತ್ತೆ ಬಂದ್ ಆಗುವ ಭೀತಿಯಲ್ಲಿ ಚಾರ್ಮಾಡಿ ಘಾಟ್

ಮಂಗಳೂರು ಜೂನ್ 13 : ಕಳೆದ ವರ್ಷ ಮಳೆಗಾಲದಲ್ಲಿ ಭೂಕುಸಿತದಿಂದ ಬಂದ್ ಆಗಿದ್ದ ಚಾರ್ಮಾಡಿ ಘಾಟ್ ಈ ಬಾರಿಯೂ ಮತ್ತೆ ಬಂದ್ ಆಗುವ ಲಕ್ಷಣಗಳು ಕಾಣಿಸುತ್ತಿದೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆಗಾಲದ ಪ್ರಾರಂಭದಲ್ಲೆ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ಬಂದ್ ಆಗುವ ಲಕ್ಷಣ ಗೋಚರಿಸಲಾರಂಭಿಸಿದೆ.

ಎರಡು ಮಳೆಗೇ ಚಾರ್ಮಾಡಿ ಘಾಟ್ ನ ಹಲವು ಕಡೆಗಳಲ್ಲಿ ಬೃಹತ್ ಗಾತ್ರದ ಮರಗಳು ರಸ್ತೆಗೆ ಉರುಳಲಾರಂಭಿಸಿದೆ. ಇದರಿಂದಾಗಿ ಘಾಟ್ ರಸ್ತೆಯಲಿ ಟ್ರಾಫಿಕ್ ಜಾಮ್ ಆಗಲಾರಂಭಿಸಿದೆ.

ಮರಗಳ ಜೊತೆಗೆ ಗುಡ್ಡದ ಮಣ್ಣುಗಳೂ ರಸ್ತೆಗೆ ಬೀಳಲಾರಂಭಿಸಿದ್ದು, ಇದು ಕಳೆದ ಬಾರಿಯ ಚಾರ್ಮಾಡಿ ಘಾಟ್ ಪರಿಸ್ಥಿತಿಯನ್ನೇ ನೆನಪಿಸುತ್ತಿದೆ.

VIDEO

Facebook Comments

comments