Connect with us

    LATEST NEWS

    ಶಾಲೆಗೆ ಹೊರಟಿದ್ದ ಹಸೀಮ್ ಹೃದಯಾಘಾತದಿಂದ ನಿಧನ

    ಮಂಗಳೂರು ಜನವರಿ 10: ಶಾಲೆಗೆ ತಯಾರಾಗಿ ಹೊರಟಿದ್ದ ವಿಧ್ಯಾರ್ಥಿ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.


    ಮೃತ ವಿಧ್ಯಾರ್ಥಿಯನ್ನು ಕೃಷ್ಣಾಪುರ 7ನೇ ಬ್ಲಾಕ್‌ ನಿವಾಸಿ ಮೊಹಮ್ಮದ್‌ ಹಸೀಮ್‌ (17) ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಎಂದಿನಂತೆ ಶಾಲೆಗೆ ತೆರಳು ಸಿದ್ದನಾಗಿದ್ದ ಹಸೀಮ್‌ಗೆ ಏಕಾಏಕಿ ತಲೆ ಸುತ್ತು ಬಂದು ಬಿದ್ದಿದ್ದು, ಮನೆಮಂದಿ ತತ್‌ಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದು. ಆದರೆ ಅಲ್ಲಿ ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ್ದು, ಬದುಕುಳಿಯುವ ಆಸೆಯಿಂದ ಪೋಷಕರು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ದುರದೃಷ್ಟವಶಾತ್ ಅದಾಗಲೇ ಕೊನೆಯುಸಿರೆಳೆದಿದ್ದ. ಅಬ್ದುಲ್‌ ರೆಹಮಾನ್‌ ದಂಪತಿ ಮೂವರು ಪುತ್ರರಲ್ಲಿ ಮೃತ ಹಸೀಮ್‌ ಎರಡನೆಯವನಾಗಿದ್ದಾನೆ.

     

    Share Information
    Advertisement
    Click to comment

    You must be logged in to post a comment Login

    Leave a Reply