Connect with us

    KARNATAKA

    ಮನೆಕೆಲಸದಾಕೆ ಜೊತೆ ಲೈಂಗಿಕ ಕ್ರಿಯೆ ಸಂದರ್ಭ ವೃದ್ದನಿಗೆ ಹೃದಯಾಘಾತ

    ಬೆಂಗಳೂರು: ಪ್ಲಾಸ್ಟಿಕ್ ಚೀಲದಲ್ಲಿ ಶವವಾಗಿ ಪತ್ತೆಯಾಗಿದ್ದ ವೃದ್ದನ ಕೊಲೆ ಪ್ರಕರಣ ಇದೀಗ ತಿರುವು ಪಡೆದುಕೊಂಡಿದ್ದು, ಮನೆ ಕೆಲಸದಾಕೆ ಜೊತೆ ಲೈಂಗಿಕ ಕ್ರಿಯೆ ಸಂದರ್ಭ ವೃದ್ದ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
    ಬೆಂಗಳೂರಿನ ಜಿಪಿ ನಗರದಲ್ಲಿ 67 ವರ್ಷದ ಉದ್ಯಮಿ ಬಾಲ ಸುಬ್ರಮಣಿಯನ್ ದೇಹವು ಪಾಸ್ಟಿಕ್ ಚೀಲದಲ್ಲಿ ಶವವಾಗಿ ಪತ್ತೆಯಾಗಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ ಸಂದರ್ಭ ಪ್ರಕರಣಕ್ಕೆ ಒಂದು ಇನ್ಟ್ರೆಸ್ಟಿಂಗ್ ಟ್ವಿಸ್ಟ್ ಸಿಕ್ಕಿದೆ.


    67 ವರ್ಷದ ಉದ್ಯಮಿ ತನ್ನ (35) ಮನೆಕೆಲಸದ ಮಹಿಳೆಯ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇತನು ನವೆಂಬರ್ 16 ರಂದು ತನ್ನ ಮನೆಕೆಲಸದ ಮಹಿಳೆಯ ಮನೆಗೆ ಭೇಟಿ ನೀಡಿದ್ದ ಮತ್ತು ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    ಮಹಿಳೆಯನ್ನು ವಿಚಾರಣೆ ನಡೆಸಿದಾಗ, ಈ ಬಗ್ಗೆ ಒಪ್ಪಿಕೊಂಡಿದ್ದಾಳೆ. ಪೊಲೀಸರು ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಬಹುದು ಎಂದು ಮನೆಯವರು ಆತಂಕಗೊಂಡಿದ್ದರಿಂದ ಪತಿ ಮತ್ತು ಸಹೋದರನ ಸಹಾಯದಿಂದ ಶವವನ್ನು ರಸ್ತೆಯಲ್ಲಿ ಎಸೆದಿದ್ದಾಳೆ. ಬಾಲ ಸುಬ್ರಮಣಿಯನ್ ತನ್ನ ಮನೆಕೆಲಸದ ಮಹಿಳೆಯೊಂದಿಗೆ ಬಹಳ ದಿನಗಳಿಂದ ಸಂಬಂಧ ಹೊಂದಿದ್ದನು ಮತ್ತು ಅವನು ವಾರಕ್ಕೆ ಎರಡು ಬಾರಿ ಅವಳ ಮನೆಗೆ ಭೇಟಿ ನೀಡುತ್ತಿದ್ದನು ಎಂದು ತಿಳಿದು ಬಂದಿದೆ. ಬಾಲ ಸುಬ್ರಮಣಿಯನ್ ಕಳೆದ ವರ್ಷ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply