Connect with us

LATEST NEWS

ರಾಧಿಕಾ ಯಾರೋ ಗೊತ್ತಿಲ್ಲ. ಯಾರಪ್ಪ ಅವರೆಲ್ಲ ಎಂದರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

ಮಂಡ್ಯ ಜನವರಿ 10: ವಂಚಕ ಯುವರಾಜನ ಪ್ರಕರಣದಲ್ಲಿ ಸಿಸಿಬಿ ವಿಚಾರಣೆಗೆ ಒಳಗಾಗಿರುವ ಸ್ಯಾಂಡಲ್‌ವುಡ್‌ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಕುರಿತಂತೆ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.


ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೇರಲೆಕೆರೆ ಗ್ರಾಮದಲ್ಲಿ ನಡೆದ ಕುಡಿಯುವ ನೀರಿನ ಯೋಜನೆ ಉಧ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಕುಮಾರಸ್ವಾಮಿಯವರು ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಸಿಸಿಬಿಯಿಂದ ರಾಧಿಕಾ ಕುಮಾರಸ್ವಾಮಿ ವಿಚಾರಣೆ ಹಿನ್ನೆಲೆ ಮಾತನಾಡಿದ ಅವರು ರಾಧಿಕಾ ಯಾರು ಎಂದು ನನಗೆ ಗೊತ್ತಿಲ್ಲ. ಯಾರಪ್ಪ ಅವರೆಲ್ಲ ಎಂದು ಕುಮಾರಸ್ವಾಮಿ ರಾಧಿಕಾ ಕುಮಾರಸ್ವಾಮಿ ವಿಚಾರವಾಗಿ ಪ್ರತಿಕ್ರಿಯೆ ನೀಡದೇ ತೆರಳಿದರು.

Facebook Comments

comments