Connect with us

LATEST NEWS

ಶಾಲಾ ಆವರಣದಲ್ಲಿ ಆತ್ಮಹತ್ಯೆಗೆ ಶರಣಾದ ಹಳೆ ವಿಧ್ಯಾರ್ಥಿ…!!

ಮಂಗಳೂರು ಫೆಬ್ರವರಿ 5: ಶಾಲೆಯ ಹಳೆ ವಿಧ್ಯಾರ್ಥಿಯೊಬ್ಬ ಅದೇ ಶಾಲೆಯ ಮುಂಭಾಗದಲ್ಲಿದ್ದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಜೆ ಠಾಣೆ ವ್ಯಾಪ್ತಿಯ ನರಿಂಗಾನ ಗ್ರಾಮದ ಕೊಲ್ಲರಕೋಡಿ ಶಾಲಾ ಮೈದಾನದಲ್ಲಿ ನಡೆದಿದೆ.


ಮೃತ ಯುವಕನನ್ನು ನೆತ್ತಿಲಪದವು ಸೈಟ್‌‌ನ ರಕ್ಷಿತ್‌‌‌‌‌‌ ಸನಿಲ್‌‌ (22) ಎಂದು ಗುರುತಿಸಲಾಗಿದೆ. ಈತ ಕೊಲ್ಲರಕೋಡಿ ಪ್ರೌಢಶಾಲೆಯ ಕಚೇರಿಯ ಮುಂಭಾಗದಲ್ಲಿರುವ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಕ್ಷಿತ್‌‌ ಅದೇ ಶಾಲೆಯ ಹಳೆ ವಿದ್ಯಾರ್ಥಿ. ಕೊಣಾಜೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.