ಊಟದ ಹಣ ಕೇಳಿದಕ್ಕೆ ಕ್ಯಾಂಟಿನ್ ಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

ಮಂಗಳೂರು ಜನವರಿ 4: ಕ್ಯಾಂಟಿನ್ ನಲ್ಲಿ ಊಟ ಮಾಡಿ ಹಣ ಕೇಳಿದಕ್ಕೆ ಕ್ಯಾಂಟೀನಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಘಟನೆ ಮಂಗಳೂರು ಹೊರ ವಲಯದ ಉಳ್ಳಾಲ ತೊಕ್ಕೊಟ್ಟುವಿನಲ್ಲಿ ಸಂಭವಿಸಿದೆ.

ತೊಕ್ಕೊಟ್ಟು ಕಾಪಿಕಾಡಿನಲ್ಲಿರುವ ಈ ಕ್ಯಾಂಟೀನನ್ನು ಹಳೇಕೋಟೆಯ ಅಬೀದ್ ಎಂಬವರು ನಡೆಸುತ್ತಿದ್ದರು. ನಿನ್ನೆ ರಾತ್ರಿ ಊಟ ಮಾಡಲು ಬಂದ ತಂಡ ಊಟ ಮಾಡಿ ಹೊರಟು ನಿಂತಾಗ ಕ್ಯಾಂಟೀನ್‌ ಮಾಲಿಕ ಊಟದ ಹಣ ಕೇಳಿದ್ದಾರೆ. ಆಗ ತಂಡ ಹಭಿಬ್ ಮೇಲೆ ಹಲ್ಲೆ ನಡೆಸಿ ನಂತರ ಕ್ಯಾಂಟಿನ್ ಗೆ ಬೆಂಕಿ ಹಚ್ಚಿದ್ದಾರೆ.

ಕ್ಯಾಂಟಿನ್ ಸಂಪೂರ್ಣ ಸುಟ್ಟು ಹೋಗಿದ್ದು, ಉಳ್ಳಾಲ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಕುಂಪಲ ನಿವಾಸಿ ರವೂಫ್ ತಂಡ ಈ ಕೃತ್ಯ ನಡೆಸಿದೆ ಎಂದು ಶಂಕಿಸಲಾಗಿದೆ.