ನೋಯ್ಡಾ ನವೆಂಬರ್ 22: ಶಾಲೆ ದ್ವಾರದ ಹತ್ತಿರ ಬಾಲಕನೊಬ್ಬನ ಮೇಲೆ ಕಾರೊಂದು ಹರಿದ ಘಟನೆ ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿರುವ ಅಜ್ನಾರಾ ಹೋಮ್ಸ್ ವಸತಿ ಸೊಸೈಟಿಯೊಳಗೆ ನಡೆದಿದ್ದು, ಘಟನೆಯಲ್ಲಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.


ತನ್ನ ಅಕ್ಕನ ಜೊತೆ ಶಾಲೆಗೆ ತೆರಳಲು ಬಾಲ ಓಡುತ್ತಾ ಬಂದಿದ್ದಾನೆ. ಈ ವೇಳೆ ಈತನ ಕಾಲು ತಾಗಿ ಅಲ್ಲೆ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಕಾರೊಂದು ಸೀದಾ ಬಾಲಕನ ಮೇಲೆ ಹರಿದಿದೆ. ಕೂಡಲೇ ಚಾಲಕ ಕಾರನ್ನು ನಿಲ್ಲಿಸಿ ಬಾಲಕನನ್ನು ಹೊರಗೆ ತೆಗೆದಿದ್ದಾರೆ. ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

Share Information