Connect with us

    LATEST NEWS

    ಕಂಬಳದ ಹಿಂಸೆ ಬಗ್ಗೆ ಮಾತನಾಡುವ ಪೇಟಾ ಸದಸ್ಯರಿಗೆ ಕಾಣದ ಕಂಬಳ ಕೋಣದ ಹುಟ್ಟುಹಬ್ಬ ಸಂಭ್ರಮ..!

    ಕಂಬಳದ ಹಿಂಸೆ ಬಗ್ಗೆ ಮಾತನಾಡುವ ಪೇಟಾ ಸದಸ್ಯರಿಗೆ ಕಾಣದ ಕಂಬಳ ಕೋಣದ ಹುಟ್ಟುಹಬ್ಬ ಸಂಭ್ರಮ..!

    ಮೂಡುಬಿದಿರೆ ನವೆಂಬರ್ 19: ಕರಾವಳಿಯ ಜಾನಪದ ಕ್ರೀಡೆ ಕಂಬಳದಲ್ಲಿ ಕೋಣಗಳಿಗೆ ಹಿಂಸಿಸುತ್ತಾರೆ ಎಂಬ ಪೇಟಾದ ಸುಳ್ಳು ಆರೋಪಗಳ ನಡುವೆಯೂ ಜಿಲ್ಲೆಯಲ್ಲಿ ಕಂಬಳ ಕೋಣಗಳನ್ನು ತಮ್ಮ ಮಕ್ಕಳಿಗಿಂತ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎನ್ನುವುದಕ್ಕೆ ಉದಾಹರಣೆಗಳು ಸಾಕಷ್ಟು ಸಿಗುತ್ತಿದೆ. ಮೂಡಬಿದಿರೆಯ ಕಂಬಳ ಕೋಣದ ಯಜಮಾನರೊಬ್ಬರು ತಮ್ಮ ಪ್ರೀತಿಯ ಕೋಣಕ್ಕೆ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿ ಪೇಟಾಕ್ಕೆ ತಿರುಗೇಟು ನೀಡಿದ್ದಾರೆ.

    ಮೂಡಬಿದಿರೆಯ ಮೂಡುಕೊಣಾಜೆ ಸಮೀಪದ ಕೊಪ್ಪದೊಟ್ಟು ರಾಘುವ ಪೂಜಾರಿ ತಾವು ಸಾಕುತ್ತಿರುವ, ಮೂರರ ಹರೆಯ ಕೋಣ (ಮಂಜು) ಹುಟ್ಟುಹಬ್ಬವನ್ನು ಆಚರಿಸಿದರು.

    ಶ್ರೀ ಕ್ಷೇತ್ರ ಧರ್ಮಸ್ಥಳ ಗೋಶಾಲೆಯಿಂದ 11 ತಿಂಗಳ ಕೋಣವನ್ನು ಮನೆಗೆ ತರಲಾಗಿತ್ತು. 2017ರಲ್ಲಿ ಅದಕ್ಕೆ ಮಂಜು ಎಂದು ನಾಮಕರಣ ಮಾಡಿ ಮೊದಲ ವರ್ಷ ಹುಟ್ಟುಹಬ್ಬ ಆಚರಿಸಿದ್ದರು. ನಂತರ 2018ರಲ್ಲಿ ಎರಡನೇ ವರ್ಷದ ಹುಟ್ಟುಹಬ್ಬವನ್ನೂ ಆಚರಿಸಲಾಗಿತ್ತು. ಈ ಬಾರಿ ಮೂರನೇ ವರ್ಷದ ಹುಟ್ಟುಹಬ್ಬವನ್ನು ಉಡುಗೊರೆ ಸಹಿತ ಆಚರಿಸಲಾಗಿದೆ. ಅಲ್ಲದೆ ಕಂಬಳದ ಓಟಕ್ಕೆ ಮಂಜುವನ್ನು ತರಬೇತುಗೊಳಿಸಲಾಗುತ್ತಿದೆ.

    ಹುಟ್ಟುಹಬ್ಬ ಸಂದರ್ಭ ಕೋಣಕ್ಕೆ ಕಂಬಳ ಸಂದರ್ಭ ಮಾಡುವ ಎಲ್ಲಾ ಅಲಂಕಾರಗಳನ್ನು ಮಾಡಿ. ಹುರುಳಿ ಕಾಳನ್ನು ಬೇಯಿಸಿ ತಿನ್ನಲು ನೀಡಿದರು. ಅಲ್ಲದೆ ಮನೆಯ ಮಹಿಳೆಯರು ಆರತಿ ಮಾಡಿ, ಪೂಜೆ ಸಲ್ಲಿಸಿದರು. ಈ ಬಾರಿ ಯಾಜಮಾನರು ಉಡುಗೊರೆ ರೂಪದಲ್ಲಿ ಮಂಜುವಿನ ಬಲಬದಿಯ ಕಿವಿಗೆ ಬೆಳ್ಳಿಯ ಒಂಟಿ ನೀಡಿದ್ದಾರೆ.

    ಕಂಬಳದಲ್ಲಿ ಕೋಣಗಳಿಗೆ ಬರೀ ಹಿಂಸೆ ಮಾಡುತ್ತಾರೆ ಎಂದು ವಿಡಿಯೋ ಮೂಲಕ ಸುಪ್ರೀಂಕೋರ್ಟ್ ಗೆ ದೂರು ಸಲ್ಲಿಸಿದ ಪೇಟಾಗೆ, ಕೋಣಗಳನ್ನು ಯಾವ ರೀತಿ ಸಾಕುತ್ತಾರೆ ಎನ್ನುವ ಸುದ್ದಿ ಕಣ್ಣಿಗೆ ಕಾಣಿಸದೇ ಇರುವುದು ವಿಪರ್ಯಾಸವೇ ಸರಿ.

    Share Information
    Advertisement
    Click to comment

    You must be logged in to post a comment Login

    Leave a Reply