LATEST NEWS
ಜನ ಬೆಂಬಲವಿಲ್ಲದ ಬಿಜೆಪಿಯ ಪರಿವರ್ತನಾ ಯಾತ್ರೆ – ಸಿಎಂ
ಜನ ಬೆಂಬಲವಿಲ್ಲದ ಬಿಜೆಪಿಯ ಪರಿವರ್ತನಾ ಯಾತ್ರೆ – ಸಿಎಂ
ಮಂಗಳೂರು ನವೆಂಬರ್ 04: ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆ ಬಿಜೆಪಿಯವರದ್ದು ಪಶ್ಚಾತ್ತಾಪ ಯಾತ್ರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಇಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಪರಿವರ್ತನೆ ಯಾತ್ರೆ ಪ್ಲಾಫ್ ಆಗಿದ್ದು, ಯಾತ್ರೆಗೆ ಜನಬೆಂಬಲ ಸಿಕ್ಕಿಲ್ಲ ಎಂದು ಹೇಳಿದರು. ಪರಿವರ್ತನಾ ಯಾತ್ರೆಗೆ 3 ಲಕ್ಷ ಜನರನ್ನು ಸೇರಿಸುವುದಾಗಿ ಬಿಜೆಪಿ ಹೇಳಿಕೊಂಡಿತ್ತು, ಆದರೆ ಬೆಂಗಳೂರಿನಲ್ಲಿ ಖಾಲಿ ಖುರ್ಚಿ ಗಳಿರೋದೇ ಪರಿವರ್ತನಾ ಯಾತ್ರೆಗೆ ಜನ ಬೆಂಬಲ ಇಲ್ಲ ಎನ್ನುವುದಕ್ಕೆ ಸಾಕ್ಷಿ ಎಂದು ಹೇಳಿದರು.
ಬಿಜೆಪಿ ಯಾತ್ರೆಗೆ ಪರ್ಯಾಯವಾಗಿ ಕಾಂಗ್ರೆಸ್ ಯಾತ್ರೆ ಮಾಡೋದಿಲ್ಲ ಬದಲಾಗಿ ಎಲ್ಲಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆ ನಡೆಸುತ್ತೇವೆ, ಎಲ್ಲಾ ಕ್ಷೇತ್ರದಲ್ಲಿ ನಾನೇ ಸಭೆಗೆ ಹೋಗುತ್ತೇನೆ ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅಕ್ರಮ ಗಣಿಗಾರಿಕೆಯ ಬಗ್ಗೆ ಜನಾರ್ಧನ ರೆಡ್ಡಿಗೆ CBI ಕ್ಲೀನ್ ಚಿಟ್ ನೀಡಿರುವ ವಿಚಾರ, ಅಕ್ರಮ ಕಲ್ಲು ಗಣಿಗಾರಿಕೆಯ 25ಸಾವಿರ ಕೋಟಿ ರೂ ಹಗರಣ. ಈ ಹಗರಣಕ್ಕೆ ಸಂಬಂಧಿಸಿದಂತೆ CBI ಸಾಕ್ಷ್ಯಾಧಾರ ಇಲ್ಲ ಅಂತ ಹೇಳಿದೆ. ಈ ಹಿನ್ನಲೆಯಲ್ಲಿ ಈ ಪ್ರಕರಣವನ್ನು SIT ಗೆ ನೀಡಿ ತನಿಖೆ ನಡೆಸಲಾಗುವುದು ಎಂದು ಹೇಳಿದರು. ಈ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಹಗರಣದ ತನಿಖೆ ನಡೆಸಲಾಗುವುದು ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿಚಾರವಾಗಿ ಕೊಡಗು ಮುಖಂಡರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಹೈಕೋರ್ಟ್ ನಿಂದ ಯಾವುದೇ ಆದೇಶ ಬಂದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಮತ್ತೆ ಐವನ್ ಮತ್ತು ಮಿಥುನ್ ಕೋಲ್ಡ್ ವಾರ್
ಸಿಎಂ ಸಿದ್ದರಾಮಯ್ಯ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಾಗ ಜೈಕಾರ ಹೇಳುವಲ್ಲಿ ವಿಚಾರದಲ್ಲಿ ಐವನ್ ಹಾಗೂ ಮಿಥುನ್ ರೈ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಸಿಎಂ ಕಾರು ಬಳಿ ಮಿಥುನ್ ರೈ ಜೈಕಾರ ಕೂಗಿದರೆ, ಕಾರಿನ ಮುಂಭಾಗ ಐವನ್ ಜೈಕಾರ ಕೂಗಿದರು. ಮುಲ್ಕಿ ವಿಧಾನಸಭೆ ಕ್ಷೇತ್ರಕ್ಕೆ ಕಣ್ಣಿಟ್ಟಿರುವ ಇಬ್ಬರು ನಾಯಕರು ನಡುವೆ ನಡೆಯುತ್ತಿರುವ ಕೋಲ್ಡ್ ವಾರ್ ಮುಂದುವರೆದಿದೆ.
You must be logged in to post a comment Login