Connect with us

LATEST NEWS

ದೇಶದಲ್ಲಿ ಇಂದಿನಿಂದ ಪಬ್ ಜಿ ಬ್ಯಾನ್

ನವದೆಹಲಿ, ಸೆಪ್ಟಂಬರ್ 2: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರಕಾರ ಪಬ್ ಜಿ ಸೇರಿದಂತೆ 118 ಮೊಬೈಲ್ ಆಪ್ ಗಳನ್ನು ದೇಶದಲ್ಲಿ ನಿಶೇಧಿಸಿದೆ. ದೇಶದ ಭದ್ರತೆ ಹಾಗೂ ರಕ್ಷಣೆಯ ದೃಷ್ಟಿಯಿಂದ ಕೇಂದ್ರ ಸರಕಾರ ಈ ನಿರ್ಧಾರಕ್ಕೆ ಬಂದಿದ್ದು, ಪಬ್ ಜಿ ಪ್ರಿಯರಿಗೆ ಈ ನ್ಯೂಸ್ ಶಾಕ್ ನೀಡಿದೆ.

ಚೀನಾ ಹಾಗೂ ಭಾರತದ ನಡುವೆ ಗಡಿ ವಿವಾದ ತಾರಕಕ್ಕೇರುತ್ತಿರುವ ನಡುವೆಯೇ ಭಾರತ ಸರಕಾರ ಈಗಾಗಲೇ ಚೀನಾದ ಪ್ರಮುಖ ಮೊಬೈಲ್ ಆ್ಯಪ್ ಗಳಾದ ಟಿಕ್ ಟಾಕ್, ಶೇರ್ ಇಟ್ ಸೇರಿದಂತೆ 59 ಆ್ಯಪ್ ಗಳನ್ನು ನಿಶೇಧ ಮಾಡಿತ್ತು. ಇದೀಗ ಸರಕಾರ ಮತ್ತೆ 118 ಮೊಬೈಲ್ ಆ್ಯಪ್ ಗಳಿಗೆ ನಿಶೇಧ ಹೇರಿದ್ದು, ಈ ನಿಶೇಧ ಇಂದಿನಿಂದಲೇ ಜಾರಿಗೆ ಬರಲಿದೆ.