Connect with us

LATEST NEWS

ಕೈಕೊಟ್ಟ ಗೂಗಲ್…ವಿಶ್ವದ ಹಲವೆಡೆ ಗೂಗಲ್ ಸೇವೆಯಲ್ಲಿ ವ್ಯತ್ಯಯ

ನವದೆಹಲಿ: ಗೂಗಲ್ ಸಂಸ್ಥೆಯ ಜಿಮೇಲ್ ಸೇವೆಯಲ್ಲಿ ಇಂದು ವ್ಯತ್ಯಯ ಉಂಟಾಗಿದೆ. ಭಾರತ ಸೇರಿದಂತೆ ವಿಶ್ವದ ಹಲವೆಡೆ ಜಿಮೇಲ್‌ ಸೇವೆಯಲ್ಲಿ ವ್ಯತ್ಯಯವಾಗಿದ್ದು ಬಳಕೆದಾರರು ಯಾವುದೇ ಇ ಮೆಲ್ ಕಳುಹಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.


ಈ ಕುರಿತಂತೆ ಸ್ವತಃ ಗೂಗಲ್‌ ಕಂಪನಿ ಜಿಮೇಲ್‌ ಡೌನ್‌ ಆಗಿರುವುದನ್ನು ಖಚಿತಪಡಿಸಿದ್ದು ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದೆ. ಜಿಮೇಲ್‌ ಡೌನ್‌ ಮ್ಯಾಪ್‌ ಭಾರತದಲ್ಲಿ ಬೆಳಗ್ಗೆ 11 ಗಂಟೆಯಿಂದ ಈ ಸಮಸ್ಯೆ ಎದುರಾಗಿದೆ.
ಜಿಮೇಲ್‌ನಲ್ಲಿ ಚಿತ್ರಗಳು, ವಿಡಿಯೊಗಳು ಹಾಗೂ ಫೈಲ್‌ಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ. ಜಿಮೇಲ್‌ನ ವೈಯಕ್ತಿಕ ಖಾತೆಗಳಲ್ಲಿ ದೊಡ್ಡ ದೊಡ್ಡ ಮೇಸೆಜ್‌ಗಳನ್ನು ಕಳಹಿಸಲು ಆಗುತ್ತಿಲ್ಲ ಎಂದು ಬಳಕೆದಾರರು ದೂರಿದ್ದಾರೆ.


ಭಾರತ ಸೇರಿದಂತೆ ಏಷ್ಯಾ, ಯುರೋಪ್‌ ಹಾಗೂ ಅಮೆರಿಕ ಖಂಡದ ಹಲವು ದೇಶಗಳಲ್ಲಿ ಈ ಸಮಸ್ಯೆ ಉಂಟಾಗಿದೆ. ಜಿಸ್ಯೂಟ್‌ ಸೇರಿದಂತೆ, ಗೂಗಲ್‌ ಡ್ರೈವ್‌ ಸೇವೆಯಲ್ಲೂ ಸಮಸ್ಯೆಯಾಗಿದೆ. ಮಾಹಿತಿ, ಚಿತ್ರ, ವಿಡಿಯೊಗಳನ್ನು ಅಪ್‌ಲೋಡ್‌ ಮಾಡಲು ಮತ್ತು ಡೌನ್‌ಲೋಡ್‌ ಮಾಡಲು ಆಗುತ್ತಿಲ್ಲ ಎಂದು ಬಳಕೆದಾರರು ತಿಳಿಸಿದ್ದಾರೆ.  ಗೂಗಲ್‌ ಕಂಪನಿ ಜಿಮೇಲ್‌ ಸೇವೆಯಲ್ಲಿ ತೊಂದರೆಯಾಗಿರುವುದರ ಬಗ್ಗೆ ಜಿಸ್ಯೂಟ್‌ ಡ್ಯಾಶ್‌ ಬೋರ್ಡ್‌ನಲ್ಲಿ ಪ್ರಕಟಿಸಿದೆ. ಮಧ್ಯಾಹ್ನದ ನಂತ ವಿಶ್ವದ ಹಲೆವೆಡ ಗೂಗಲ್ ನ ಸೇವೆ ಸರಿಯಾಗಿದೆ.

Facebook Comments

comments