LATEST NEWS
ಗೂಡ್ಸ್ ರೈಲಿನ ಮೇಲೆ ಸೆಲ್ಫಿ ಹುಚ್ಚು…ಕರೆಂಟ್ ಶಾಕ್ ಗೆ ಗಂಭೀರವಾಗಿ ಗಾಯಗೊಂಡ ಯುವಕ
ಮಂಗಳೂರು : ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಸೆಲ್ಪಿ ತೆಗೆಯಲು ಹೋಗಿ ಕರೆಂಟ್ ಶಾಕ್ ಹೊಡೆದು ಯುವಕನೊಬ್ಬನಿಗೆ ಸುಟ್ಟಗಾಯಗಳಾದ ಘಟನೆ ಸುರತ್ಕಲ್ ರೈಲ್ವೆ ಸ್ಟೇಷನ್ ನಿಲ್ದಾಣ ಸಮೀಪದ ಅಗರಮೇಲು ಎಂಬಲ್ಲಿ ನಡೆದಿದೆ.
ಸಲಾನ್ ಪಾರಸ್ (21) ಎಂಬಾತ ವಿದ್ಯುತ್ ಅಘಾತಕ್ಕೊಳಗಾದವನು. ಈತ ಸುರತ್ಕಲ್ ರೈಲ್ವೆ ನಿಲ್ದಾಣದ ಬಳಿಯ ಅಗರಮೇಲು ಎಂಬಲ್ಲಿ ನಿಂತಿದ್ದ ಗೂಡ್ಸ್ ರೈಲಿನ ಮೇಲೆ ನಿಂತು ಸೆಲ್ಪಿ ತೆಗೆಯಲು ಹೋಗಿದ್ದ. ಈ ವೇಳೆ ಹೈ ವೋಲ್ಟೇಜ್ ತಂತಿ ತಗುಲಿ ದೇಹ ಭಾಗಶಃ ಸುಟ್ಟು ಹೋಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
You must be logged in to post a comment Login