Connect with us

LATEST NEWS

ಮಂಗಳೂರು ವಿಮಾನ ನಿಲ್ದಾಣದ ಟಾಯ್ಲೆಟ್ ನಲ್ಲಿ 1 ಕೆ.ಜಿ ಚಿನ್ನ ಪತ್ತೆ

ಮಂಗಳೂರು ವಿಮಾನ ನಿಲ್ದಾಣದ ಟಾಯ್ಲೆಟ್ ನಲ್ಲಿ 1 ಕೆ.ಜಿ ಚಿನ್ನ ಪತ್ತೆ

ಮಂಗಳೂರು ನವೆಂಬರ್ 04: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟಾಯ್ಲೆಟ್ ನಲ್ಲಿ ಸುಮಾರು 1 ಕೆಜಿ ಅಕ್ರಮ ಚಿನ್ನ ಪತ್ತೆಯಾದ ಘಟನೆ ನಡೆದಿದೆ.

ದುಬೈಯಿಂದ ಮಂಗಳೂರಿಗೆ ಬಂದಿಳಿದ ಸ್ಪೈಸ್ ಜೆಟ್ ವಿಮಾನದಲ್ಲಿ ಅಕ್ರಮ ಚಿನ್ನ ಸಾಗಾಟ ನಡೆದಿದೆ. ಸ್ಪೈಸ್ ಜೆಟ್ ವಿಮಾನದಲ್ಲಿ ಬಂದ ಅಪರಿಚಿತ ವ್ಯಕ್ತಿ ಚಿನ್ನವನ್ನು ವಿಮಾನ ನಿಲ್ದಾಣದ ಟಾಯ್ಲೆಟ್ ನಲ್ಲಿ ಎಸೆದು ಹೋಗಿದ್ದು, ನಂತರ ಅದನ್ನು ವಶಪಡಿಸಿಕೊಳ್ಳುವ ಯೋಜನೆಯನ್ನು ಆರೋಪಿ ಹೊಂದಿದ್ದ ಎಂದು ಹೇಳಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಡಿ ಆರ್ ಐ ಅಧಿಕಾರಿಗಳ ಕಾರ್ಯಾಚರಣೆ ನಡೆಸಿದಾಗಿ ವಿಮಾನ ನಿಲ್ದಾಣದ ಟಾಯ್ಲೆಟ್ ನಲ್ಲಿ ಅಕ್ರಮ ಚಿನ್ನ ಪತ್ತೆಯಾಗಿದೆ.

ಒಟ್ಟು 10 ಚಿನ್ನದ ಬಿಸ್ಕೆತ್ ನ್ನು ವಶಪಡಿಸಿಕೊಳ್ಳಲಾಗಿದ್ದು ಸುಮಾರು 1.166 ಕೆಜಿ ಚಿನ್ನ ತೂಕ ಇದ್ದು, ಇದರ ಮೌಲ್ಯ 34 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಶೌಚಾಲಯದಲ್ಲಿ ಅಕ್ರಮ ಚಿನ್ನ ಎಸೆದು ಹೋಗಿರುವ ವ್ಯಕ್ತಿಯ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.