Connect with us

LATEST NEWS

ಉಡುಪಿ 1 ಕೆಜಿ ಚಿನ್ನದ ಗಟ್ಟಿಗಳ ದರೋಡೆ

ಉಡುಪಿ 1 ಕೆಜಿ ಚಿನ್ನದ ಗಟ್ಟಿಗಳ ದರೋಡೆ

ಉಡುಪಿ ಮೇ.26: ಮಾಸ್ಕ್ ಹಾಗೂ ಹೆಲ್ಮೆಟ್ ಹಾಕಿದ್ದ ದರೋಡೆಕೋರರಿಬ್ಬರು ಉಡುಪಿ ಚಿನ್ನದ ವ್ಯಾಪಾರಿಯಿಂದ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ದೋಚಿ ಪರಾರಿಯಾಗಿರುವ ಘಟನೆ ಉಡುಪಿಯ ಬೀಡಿನಗುಡ್ಡೆಯಲ್ಲಿ ನಡೆದಿದೆ.

ಉಡುಪಿಯ ಬೀಡಿನಗುಡ್ಡೆಯಲ್ಲಿ, ವಿಜಯ್ ಜಾಧವ್ ಹೆಸರಿನ ವ್ಯಾಪಾರಿ ಚಿನ್ನ ಕರಗಿಸುವ ಕುಲುಮೆ ಕೇಂದ್ರವನ್ನು ನಡೆಸುತ್ತಿದ್ದು, ನಿನ್ನೆ, ಅವರು ಒಂದು ಕಿಲೋಗ್ರಾಂಗಿಂತ ಹೆಚ್ಚು ತೂಕದ ಚಿನ್ನದ ಬಾರ್ ಗಳಿದ್ದ ಚೀಲ ಹೊತ್ತುಕೊಂಡು ತಮ್ಮ ಅಂಗಡಿಯನ್ನು ತೆರೆಯುತ್ತಿದ್ದರು, ಈ ವೇಳೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೆಲ್ಮೆಟ್ ಧರಿಸಿದ್ದ ಇಬ್ಬರು ವ್ಯಕ್ತಿಗಳು ಚಿನ್ನದ ಬಾರ್ ಗಳಿದ್ದ ಚೀಲ ಕಸಿದು ಕತ್ತಲೆಯಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸುಮಾರು 45 ಲಕ್ಷ ಮೌಲ್ಯದ 1 ಕೆ.ಜಿ. 227 ಗ್ರಾಂ ತೂಕದ ಚಿನ್ನವನ್ನು ಕಳ್ಳರು ಎಗರಿಸಿದ್ದಾರೆ. ವಿಜಯ್ ಜಾಧವ್ ಅವರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

Facebook Comments

comments