Connect with us

    LATEST NEWS

    ಮಂಗಳೂರು ವಿಮಾನ ನಿಲ್ದಾಣದಲ್ಲಿ 92 ಲಕ್ಷ ಮೌಲ್ಯದ ಚಿನ್ನ ಅಕ್ರಮ ಸಾಗಾಟಕ್ಕೆ ಯತ್ನ..ಆರೋಪಿ ಅಂದರ್

    ಮಂಗಳೂರು ಎಪ್ರಿಲ್ 3: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗಿದ್ದು, ಬಂಧಿತನಿಂದ 92.27 ಲಕ್ಷ ಬೆಲೆಬಾಳುವ 1 ಕೆಜಿ 993 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.


    ಬಂಧಿತನನ್ನು ಉಳ್ಳಾಲದ ಮಹಮ್ಮದ್ ಆಸೀಫ್ ಎಂದು ಗುರುತಿಸಲಾಗಿದ್ದು, ಈತ ಇಂದು ದುಬೈನಿಂದ ಮಂಗಳೂರಿಗೆ ಎರ್ ಇಂಡಿಯಾ ವಿಮಾನದ ಮೂಲಕ ಆಗಮಿಸಿದ್ದು, ಚಿನ್ನವನ್ನು ಪೌಡರ್ ರೂಪದಲ್ಲಿ ಕರಗಿಸಿ ಅದನ್ನು ವಿಶೇಷ ರೀತಿಯಾಗಿ ವಿನ್ಯಾಸಗೊಳಿಸಲಾಗಿದ್ದು, ಒಳ ಉಡುಪು ಹಾಗೂ ಜೀನ್ಸ್ ನಲ್ಲಿ ಇಟ್ಟು ಸಾಗಾಟಕ್ಕೆ ಯತ್ನಿಸಿದ್ದಾನೆ. ಪ್ರಯಾಣಿಕರ ತಪಾಸಣೆ ಸಂದರ್ಭ ಅನುಮಾನದ ಮೇರೆಗೆ ಆರೋಪಿಯನ್ನು ತಪಾಸಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply