40 ಸಾವಿರದ ಸನಿಹದಲ್ಲಿ ಚಿನ್ನದ ಬೆಲೆ ಸತತ ಏರಿಕೆಯಲ್ಲಿ ಚಿನ್ನದ ಬೆಲೆ

ಮಂಗಳೂರು ಅಗಸ್ಟ್ 27: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಸದ್ಯದಲ್ಲೆ 40 ಸಾವಿರ ರೂಪಾಯಿ ಗಡಿ ದಾಟಲಿದೆ. ಗೌರಿ ಗಣೇಶ್ ಹಬ್ಬದ ಸಂದರ್ಭದಲ್ಲೇ ಜನತೆಗೆ ಚಿನ್ನದ ಬೆಲೆ ಏರಿಕೆ ಬಿಸಿ ತಟ್ಟಿದೆ.

ಸೋಮವಾರ ಮುಂಬೈ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅತಿ ಹೆಚ್ಚು ದಾಖಲೆ ಬೆಲೆ ಏರಿಕೆಯಾಗಿದ್ದು ಒಂದು ಹಂತದಲ್ಲಿ 40 ಸಾವಿರದ ಗಡಿ ದಾಟಿತ್ತು, ನಂತರ ಸಂಜೆಯ ವೇಳೆಗೆ ಸ್ವಲ್ಪ ಇಳಿಕೆ ಕಂಡು 39600ಕ್ಕೆ ಬಂದು ನಿಂತಿತು.

ಜಾಗತಿಕ ಮಾರುಕಟ್ಟೆ ಬೆಳವಣಿಗೆಗಳಿಂದ ಚಿನ್ನದ ಬೆಲೆ ನಿರಂತರವಾಗಿ ಏರಿಕೆ ಹಾದಿಯಲ್ಲೆ ಇದ್ದು, ,ಸೋಮವಾರ ಮುಂಬೈನಲ್ಲಿ 24 ಕ್ಯಾರೆಟ್ ಶುದ್ದತೆಯ ಚಿನ್ನದ ಬೆಲೆ 40,400 ರ ಆಗಿತ್ತು. ಚಿನ್ನದ ಜೊತೆ ಬೆಳ್ಳಿ ಬೆಲೆಯೂ 1450 ರೂಪಾಯಿ ಏರಿಕೆಯೊಂದಿಗೆ ಕೆಜಿಗೆ 46550 ರೂಪಾಯಿ ಆಗಿದೆ.

ಅಗಸ್ಟ್ 20 ರಿಂದ ಚಿನ್ನದ ಬೆಲೆ ನಿರಂತರವಾಗಿ ಏರಿಕೆ ದಾಖಲಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಕೂಡ ಚಿನ್ನದ ಬೆಲೆ ಏರಿಕೆ ಹಾದಿಯಲ್ಲಿದೆ.

ಗಣೇಶ್ ಚತುರ್ಥಿ ಹಬ್ಬಕ್ಕೂ ಮುನ್ನವೇ ಚಿನ್ನದ ಬೆಲೆ 40 ಸಾವಿರ ಗಡಿ ದಾಟುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

Facebook Comments

comments