ಪಣಜಿ, ಮಾರ್ಚ್ 24: ಗೋವಾ ಬೀಚ್ನಲ್ಲಿ ಕಾರು ತೊಳೆಯಲು ತೆರಳಿದ ಯುವಕರು ಅಜಾಗರೂಕತೆಯಿಂದ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.

ಗುಜರಾತ್ ಮೂಲದ ಯುವಕರು ತಮ್ಮ ಫಾರ್ಚೂನರ್ ಕಾರನ್ನು ಬೀಚ್ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ತೊಳೆಯಲು ಮುಂದಾಗಿದ್ದರು. ಈ ವೇಳೆ ಸಮುದ್ರದ ಅಲೆಗಳ ರಭಸ ಏಕಾಏಕಿ ಹೆಚ್ಚಾಗಿ, ನೀರು ಕಾರಿನೊಳಗೆ ನುಗ್ಗತೊಡಗಿತು. ಅಲೆಗಳ ಹೊಡೆತದಿಂದ ಕಾರು ನಿಧಾನವಾಗಿ ಸಮುದ್ರದೊಳಕ್ಕೆ ಎಳೆಯಲ್ಪಟ್ಟು, ಕೆಲವು ದೂರದವರೆಗೆ ನೀರಿನಲ್ಲಿ ಸಿಲುಕಿಕೊಂಡಿತು. ಇದರಿಂದ ಸ್ಥಳದಲ್ಲಿದ್ದವರು ಆತಂಕಗೊಂಡರು.
ನಂತರ ಸ್ಥಳೀಯರ ಸಹಾಯದಿಂದ ಕ್ರೇನ್ ಕರೆಸಿ, ಕಾರನ್ನು ನೀರಿನಿಂದ ಹೊರತೆಗೆದು ದಡಕ್ಕೆ ತರಲಾಯಿತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸದಿದ್ದರೂ, ಬೀಚ್ ಪ್ರದೇಶದಲ್ಲಿ ವಾಹನ ಬಳಸುವ ವೇಳೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳದಿದ್ದರೆ ಅಪಾಯ ಸಂಭವಿಸಬಹುದೆಂಬುದು ಸ್ಪಷ್ಟವಾಗಿದೆ.