ಮಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಗೆ ಗೋ ಬ್ಯಾಕ್ ಘೋಷಣೆ – ಐವನ್ ಡಿಸೋಜಾ

ಮಂಗಳೂರು ಎಪ್ರಿಲ್ 11: ವಿಜಯಾ ಬ್ಯಾಂಕ್ ವಿಲೀನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಲು ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕೆಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಮನವಿ ಮಾಡಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಗೆ ಆಗಮಿಸುವ ಮೋದಿಯವರಿಗೆ ಗೋ ಬ್ಯಾಕ್ ಹೇಳಿ ಪ್ರತಿಭಟನೆ ನಡೆಸಲಿದ್ದೇವೆ. ಜಿಲ್ಲೆಯ ಹದಿನೇಳುವರೆ ಲಕ್ಷ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದು, ಮೋದಿ ಗೋ ಬ್ಯಾಕ್ ಎಂಬ ಸ್ಲೋಗನ್ ನೊಂದಿಗೆ ಘೋಷಣೆ ಕೂಗಲಿದ್ದೇವೆ.

ಲಾಭದಾಯಕವಾಗಿದ್ದ ಬ್ಯಾಂಕನ್ನು ನಷ್ಠದ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಿದ್ದಾರೆ. ಇದರಿಂದ ಕರಾವಳಿ ಜನರು ಬೇಸರಗೊಂಡಿದ್ದಾರೆ. ಆದ್ದರಿಂದ ವಿಜಯಾ ಬ್ಯಾಂಕ್ ವಿಲೀನ ವಿಚಾರದ ಬಗ್ಗೆ ಪ್ರಧಾನಿ ಜೊತೆ ವಿಚಾರ ಮಂಡಿಸಬೇಕು.

ವಿಜಯಾಬ್ಯಾಂಕನ್ನು ಮರಳಿ ತರುವಂತೆ ಒತ್ತಾಯಿಸಬೇಕೆಂದು ಮನವಿ ಮಾಡಿದರು. ಇನ್ನು ಚೌಕಿದಾರ್ ಹೈ ಎಂದು ಹೇಳುತ್ತುರುವ ಬಿಜೆಪಿ 2014ರಿಂದ ಹೊಸ ಯೋಜನೆಗಳನ್ನು ತರುತ್ತೇವೆ ಎಂದು ಹೇಳಿಕೊಂಡೇ ಬಂದಿದ್ದು ವಿನಹ, ಯಾವುದೇ ಕಾರ್ಯ ಜಾರಿಯಾಗಿಲ್ಲ.

2019ರಲ್ಲಿ ಯೂ ಇದೇ ರಾಗ ಹಾಡುತ್ತಿದ್ದಾರೆ. ಆದ್ದರಿಂದ ಇವರಿಗೆ ಚೌಕಿದಾರ್ ಚೋರ್ ಹೈ ನಾಮಧೇಯ ಸರಿಯಾಗುತ್ತೆ ಎಂದರು. ಇನ್ನು ಪ್ರಧಾನಿ ಮೋದಿ ಪಾಕಿಸ್ತಾನವನ್ನು ಬದ್ದ ವೈರಿ ಎಂದು ಹೇಳುತ್ತಾರೆ. ಆದ್ರೆ ಪಾಕ್ ಪ್ರಧಾನಿ ಮೋದಿಯೇ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಹೇಳುತ್ತಾರೆ. ಇವರ ಒಳಗುಟ್ಟೇನು ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.