ಧುರಂಧರ್ 2 ಪಾಕಿಸ್ತಾನದಲ್ಲಿ ಬಿಡುಗಡೆಯಾಗದೇ ಇದ್ದರೂ ಅಲ್ಲಿ ಭಾರೀ ಜನಪ್ರಿಯತೆ ಗಳಿಸಿದೆ. ಬಾಕ್ಸ್ ಆಫೀಸ್ನಲ್ಲಿ 1 ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡುತ್ತಿರುವ ಧುರಂಧರ್ ಸಿನಿಮಾದ ಆದಾಯದಲ್ಲಿ ಈಗ ತಮಗೆ ಪಾಲು ನೀಡುವಂತೆ ಬೇಡಿಕೆ ಇಟ್ಟು ಟ್ರೋಲ್ ಆಗುತ್ತಿದ್ದಾರೆ.
ಕರಾಚಿಯಲ್ಲಿರುವ ಲಿಯಾರಿ ಪ್ರದೇಶದಲ್ಲಿ ನಡೆದ ಗ್ಯಾಂಗ್ವಾರ್, ಸರ್ಕಾರ ಮತ್ತು ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ಈ ಕ್ರಿಮಿನಲ್ಗಳಿಗೆ ಇರುವ ಸಂಬಂಧವನ್ನು ಆಧಾರಿಸಿ ನಿರ್ದೇಶಕ ಆದಿತ್ಯ ಧರ್ ಸಿನಿಮಾ ತೆಗೆದಿದ್ದಾರೆ. ಕಾಳಸಂತೆಯಲ್ಲಿ ಈ ಸಿನಿಮವನ್ನು ವೀಕ್ಷಿಸಿದ ಲಿಯಾರಿ ಜನ ಈಗ ಸಿನಿಮಾದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಧುರಂಧರ್ ಎರಡೂ ಸಿನಿಮಾಗಳು ಭರ್ಜರಿ ಯಶಸ್ಸು ಕಂಡು ಹಿನ್ನೆಲೆಯಲ್ಲಿ ಬಂದ ಲಾಭದಲ್ಲಿ 500 ಕೋಟಿ ರೂ. ಹಣವನ್ನು ನಮಗೆ ಕೊಡಿ. ಈ ಹಣದಲ್ಲಿ ನಾವು ರಸ್ತೆ ಹಾಗೂ ಮೂಲ ಸೌಕರ್ಯಗಳನ್ನು ನಾವು ಅಭಿವೃದ್ಧಿ ಮಾಡುತ್ತೇವೆ ಎಂದಿದ್ದಾರೆ.
ಈ ಭಾಗದ ರಸ್ತೆಗಳು ಚೆನ್ನಾಗಿಲ್ಲ. 1 ಸಾವಿರ ಕೋಟಿ ರೂ.ನಲ್ಲಿ ಅರ್ಧಭಾಗವಾದ 500 ಕೋಟಿ ರೂ. ಹಣವನ್ನು ನಮಗೆ ನೀಡಿದರೆ ಚೆನ್ನಾಗಿರುವ ರಸ್ತೆಗಳನ್ನು ನಿರ್ಮಾಣ ಮಾಡಬಹುದು. ಮಕ್ಕಳು ಅಪಾಯವಿಲ್ಲದೆ ಓಡಾಡಬಹುದು. ದಯವಿಟ್ಟು ನಮಗೆ ಹಣ ಕೊಡಿ ಎಂದು ಕೇಳಿದ್ದಾರೆ.