ಉಡುಪಿ ಮೇ 29: ಕೆಲಸ ಸಿಗದ ಹಿನ್ನಲೆ ಮನನೊಂದು ಯುವತಿಯೊಬ್ಬಳು ಡೆತ್ ನೊಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಬೈಂದೂರಿನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಗೌತಮಿ (22) ಎಂದು ಗುರುತಿಸಲಾಗಿದೆ. ಗೌತಮಿಯು ಎಂ.ಕಾಂ. ಪದವಿ ಪಡೆದಿದ್ದು, ಇತ್ತೀಚೆಗೆ ಬ್ಯಾಂಕ್ ಪರೀಕ್ಷೆ ಮತ್ತು ಕಂಪೆನಿಯಲ್ಲಿ ಉದ್ಯೋಗ ಪಡೆಯಲು ಪರೀಕ್ಷೆಗಳನ್ನು ಬರೆದರೂ ಕೂಡ ಆಕೆಗೆ ಉದ್ಯೋಗ ಸಿಗಲ್ಲಿಲ್ಲ. ಹೀಗಾಗಿ ಯುವತಿ ಮನನೊಂದು ಮನೆಯ ಮಹಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನೇಣಿಗೆ ಶರಣಾಗಿದ್ದ ಗೌತಮಿ ಅವರನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಆದರೆ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.