ಸುಳ್ಯ ಜನವರಿ 09: ಯುವತಿಯೊಬ್ಬಳು ನಾಪತ್ತೆಯಾದ ಕುರಿತಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನೇಶ್ ಎಂಬುವರು ಪುತ್ರಿ 19 ವರ್ಷ ಪ್ರಾಯದ ಸೌಜನ್ಯ ಎಂದು ಗುರುತಿಸಲಾಗಿದೆ. ದಿನೇಶ್ ಅವರು ಎಂದಿನಂತೆ ಸ್ಥಳೀಯವಾಗಿ ಕೂಲಿ ಕೆಲಸಕ್ಕೆ ಹೋಗಿದ್ದು , ಮಗಳು ಸೌಜನ್ಯ ಆ ಸಮಯ ಮನೆಯ ಬಳಿ ಇರುವ ತಮ್ಮನ ಮನೆಯಲ್ಲಿ ಇದ್ದಳು. ಸಮಯ 09:30 ಗಂಟೆಗೆ ದಿನೇಶ್ ಅವರಿಗೆ ಮಗಳು ಸೌಜನ್ಯ ಕಾಣುತ್ತಿಲ್ಲ ಎಂದು ತಾಯಿ ಪೋನ್ ಮಾಡಿ ತಿಳಿಸಿದ್ದು, ಪಿರ್ಯಾದಿದಾರರು ಕೂಡಲೇ ಮನೆಗೆ ಹೋಗಿ ಮಗಳನ್ನು ಹುಡುಕಾಡಲಾಗಿ ಕಾಣ ಸಿಗಲಿಲ್ಲ.ಬಳಿಕ ಸಂಬಂಧಿಕರ ಮನೆಯಲ್ಲಿ ಮಗಳ ಸ್ನೇಹಿತೆಯರಲ್ಲಿ ವಿಚಾರಿಸಲಾಗಿ ಮಗಳ ಬಗ್ಗೆ ಯಾವುದೇ ಪೂರಕವಾದ ಮಾಹಿತಿ ಲಭ್ಯವಾಗಿರುವುದಿಲ್ಲ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ.ಕ್ರ: 03/2026 ಕಲಂ: ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ