Connect with us

LATEST NEWS

ಭಗ್ನ ಪ್ರೇಮಿಯಿಂದ ಯುವತಿಗೆ ಚೂರಿ ಇರಿತ – ಸಿಸಿಟಿವಿಯಲ್ಲಿ ಸೆರೆಯಾದ ಹೊಡೆದಾಟದ ದೃಶ್ಯ

ಮಂಗಳೂರು: ತನ್ನ ಸ್ನೇಹಿತರೊಂದಿಗೆ ಹೊಟೇಲ್ ನಲ್ಲಿ ಕುಳಿತಿದ್ದ ಸಂದರ್ಭ ತಂಡವೊಂದು ಯುವತಿಯ ಜೊತೆ ಬಂದಿದ್ದ ಮೂವರು ಯುವಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಇದೀಗ ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.

ಹಲ್ಲೆಯಿಂದಾಗಿ ಯುವತಿಗೆ ಗಾಯಗಳಾಗಿದ್ದು ಯುವತಿಯ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ ಹೊಡೆದಾಟ ಇದಾಗಿದೆ ಎನ್ನಲಾಗಿದೆ. ಭಗ್ನ ಪ್ರೇಮಿಯೊಬ್ಬ ಸ್ನೇಹಿತರ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.


ಎರಡು ದಿನಗಳ ಹಿಂದೆ ನಡೆದ ಘಟನೆಯ ಸಿಸಿಟಿವಿ ದೃಶ್ಯಾವಳಿ ಈಗ ವೈರಲ್‌ ಆಗಿದೆ. ಜನವರಿ 30 ರಂದು ಮಧ್ಯಾಹ್ನ ಘಟನೆ ನಡೆದಿದೆ. ಯುವತಿ ಮಧ್ಯಾಹ್ನ ತನ್ನ ಮಿತ್ರರೊಂದಿಗೆ ಹೋಟೆಲ್‌ನಲ್ಲಿ ಆಹಾರ ಸೇವಿಸುತ್ತಿರುವಾಗ ಆಗಮಿಸಿದ ತ್ರಿಶೂಲ್‌ ಮತ್ತು ಆತನ ಮಿತ್ರರು ಪ್ರತೀಕ್ಷಾ ಹಾಗೂ ಇತರರ ಮೇಲೆ ಚೂರಿಯಿಂದ ಹಲ್ಲೆಗೆ ಮುಂದಾಗಿದ್ದಾರೆ.


ತ್ರಿಶೂಲ್‌ ತನ್ನ ಮಾಜಿ ಪ್ರಿಯತಮೆಯ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾನೆ. ಪ್ರತೀಕ್ಷ್‌ನ ದೇಹದ ನಾಲ್ಕು ಕಡೆಗೆ ಚೂರಿಯ ಇರಿತದ ಗಾಯಗಳಾಗಿವೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.