ಬಿಗ್ ಬಾಸ್ ನ ವೀಕೆಂಡ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಹೇಳಿರುವಂತೆ ಗಿಲ್ಲಿ ನಟ ಒಂದು ಹೊತ್ತಿನ ಊಟ ತಯಾರು ಮಾಡಿ ಮನೆ ಮಂದಿಗೆ ಬಡಿಸಬೇಕು ಎಂದಿದ್ದರು. ಅದನ್ನು ಸ್ವಲ್ಪ ಸರಳವಾಗಿ ಪರಿಗಣಿಸಿದ್ದ ಗಿಲ್ಲಿಗೆ ಬಿಗ್ ಬಾಸ್ ಮನೆಯಲ್ಲಿ ನೋಟಿಸ್ ನೀಡಿ ತಲೆ ಬಾಚಿಕೊಳ್ಳುವಂತೆ ಮತ್ತು ಮನೆ ಮಂದಿಗೆ ಅಡುಗೆ ಮಾಡುವಂತೆ ಗಂಭೀರವಾಗಿ ಸೂಚಿಸಲಾಯಿತು.

ಅದರಂತೆಯೇ ಗಿಲ್ಲಿಯ ಪಾಕವನ್ನು ಮನೆ ಮಂದಿ ಸವಿದು ಸುಸ್ತಾಗಿದ್ದಾರೆ . ಇದರಿಂದ ಧ್ರುವಂತ್ ಬ್ರೈನ್ ವರ್ಕ್ ಮಾಡುವುದೇ ನಿಲ್ಲಿಸಿದೆ ಅಂತೆ. ಅಶ್ವಿನಿ ಮತ್ತು ಕಾವ್ಯ ಹೇಳುವಂತೆ ಪಲಾವ್ ನ ಪರಿಮಳ ಮಾತ್ರ ಇತ್ತಂತೆ. ಇನ್ನು ರಘು ಮತ್ತು ರಕ್ಷಿತಾ ಒಂದೇ ತಟ್ಟೆನಾ ಶೇರ್ ಮಾಡಿಕೊಂಡರು.