Connect with us

    LATEST NEWS

    ಸತ್ತ 30 ವರ್ಷಗಳ ಬಳಿಕ ಮದುವೆ – ಕರಾವಳಿಯ ವಿಶೇಷ ಸಂಪ್ರದಾಯ ಪ್ರೇತಗಳ ಮದುವೆ….!!

    ಮಂಗಳೂರು ಜುಲೈ 30: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಂದು ವಿಶೇಷ ಸಂಪ್ರದಾಯದ ಆಚರಣೆ ನಡೆದಿದ್ದು, ನಿಧನ ಹೊಂದಿದವರಿಗೆ 30 ವರ್ಷಗಳ ನಂತರ ಮದುವೆ ಶಾಸ್ತ್ರ ನೆರವೇರಿಸಲಾಗಿದೆ.ಸಣ್ಣ ವಯಸ್ಸಿನಲ್ಲಿಯೇ ಮರಣ ಹೊಂದಿದವರಿಗೆ ಅವರು ವಯಸ್ಸಿಗೆ ಬಂದ ಬಳಿಕ ಮದುವೆಯನ್ನು ಮಾಡಲಾಗುತ್ತದೆ. ಇದನ್ನು ಇಲ್ಲಿನ ಜನರು ಗೌರವಿಸುತ್ತಾರೆ ಮತ್ತು ನಂಬುತ್ತಾರೆ. ಮೃತಪಟ್ಟು 30 ವರ್ಷಗಳ ನಂತರ ನಡೆದ ಆತ್ಮಗಳ ಮದುವೆ ಇದು.


    ರಾಜ್ಯದ ದಕ್ಷಿಣ ಕನ್ನಡ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಈ ವಿಶಿಷ್ಟ ಸಂಪ್ರದಾಯ ಚಾಲ್ತಿಯಲಿದೆ. ಶೋಭಾ ಮತ್ತು ಚಂದಪ್ಪ ಎಂಬುವರು 30 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹುಟ್ಟಿದ ಕೂಡಲೇ ಮೃತಪಟ್ಟಿದ್ದ ಈ ಇಬ್ಬರ ಆತ್ಮಗಳಿಗೆ ಸಂಪ್ರದಾಯಬದ್ಧವಾಗಿ ವಿವಾಹ ನೆರವೇರಿಸಲಾಗಿದೆ. ಈ ಆಚರಣೆಯನ್ನು ಪ್ರೇತ ಕಲ್ಯಾಣ, ಪ್ರೇತಗಳ ಮದುವೆ ಎಂದು ಕರೆಯುತ್ತಾರೆ.

    ಈ ಆತ್ಮಗಳ ಮದುವೆ ವಿಡಿಯೋ ಒಂದನ್ನು ಯೂಟ್ಯೂಬರ್ ಅನ್ನಿ ಅರುಣ್ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಸಣ್ಣ ವಯಸ್ಸಿನಲ್ಲೇ ಮೃತಪಟ್ಟವರು ಪ್ರೇತವಾಗಿ ತಿರುಗುತ್ತಾರೆ. ಮದುವೆ ವಯಸ್ಸಿಗೆ ಬಂದ ಪ್ರೇತ ಮನೆಯವರಿಗೆ ಕಾಟ ಕೊಡುತ್ತದೆ. ಆಗ ಮನೆಯವರು ಮಂತ್ರವಾದಿಗಳ ಬಳಿಗೆ ಹೋಗಿ ಸತ್ತ ಆತ್ಮಗಳ ಮದುವೆ ಮಾಡಿಸಿ ಶಾಂತಿ ಸಿಗುವಂತೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

    ಮೃತಪಟ್ಟ ಗಂಡು ಹಾಗೂ ಹೆಣ್ಣಿನ ಮನೆಯವರು ನಿಶ್ಚಿತಾರ್ಥವನ್ನೂ ನೆರವೇರಿಸುತ್ತಾರೆ. ಆರತಕ್ಷತೆ, ಸಪ್ತಪದಿಯೂ ನಡೆಯುತ್ತದೆ. ಈ ಸಂಪ್ರದಾಯವು ದಕ್ಷಿಣ ಕನ್ನಡದಲ್ಲಿ ಆಚರಣೆಯಲ್ಲಿದೆ ಎಂದು ಅರುಣ್ ವಿವರಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply