LATEST NEWS
ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಿಬಿಐ ಗೆ ನೀಡಿ – ಜನಾರ್ಧನ ಪೂಜಾರಿ
ಮಂಗಳೂರು ಸೆಪ್ಟೆಂಬರ್ 6 – ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಒಂದು ಪ್ರಿ ಪ್ಲಾನ್ಡ್ ಕೃತ್ಯವಾಗಿದ್ದು, ಪ್ರಕರಣದ ತನಿಖೆಯನ್ನು ಈ ಕೂಡಲೇ ಸಿಬಿಐಗೆ ವಹಿಸಬೇಕೆಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ದನ ಪೂಜಾರಿ ಒತ್ತಾಯಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸುವುದಾಗಿ ಅವರು ಹೇಳಿದರು.
ಈ ಕೃತ್ಯ ಒಂದು ದಿನದಲ್ಲಿ ಮಾಡಿದ್ದಲ್ಲ ಇದೊಂದು ಪ್ರಿಪ್ಲಾನ್ಡ್ ಹತ್ಯೆ ಎಂದು ಅವರು ಅಭಿಪ್ರಾಯ ಪಟ್ಟರು ಈ ಹತ್ಯೆ ಯಾರು ಮಾಡಿದ್ದಾರೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ದುಃಖದ ಸಂಗತಿಯಾಗಿದೆ.
ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ ಇದ್ದರೂ ಮುಖ್ಯಮಂತ್ರಿ ಅವರಿಂದ ಈ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದವರು ಕಿಡಿಕಾರಿದರು. ಗೌರಿ ಲಂಕೇಶ್ ಅವರಿಗೆ ಬೆದರಿಕೆ ಇದೆ. ಅವರಿಗೆ ಭದ್ರತೆ ನೀಡಬೇಕೆಂದು ಗೌರಿ ಲಂಕೇಶ್ ತಮ್ಮ ಇಂದ್ರಜೀತ್ ಹಾಗೂ ಅವರ ತಾಯಿ ಕೂಡ ಕೇಳಿದ್ದರು. ಆದರೆ ಸರ್ಕಾರ ಗೌರಿ ಲಂಕೇಶ್ ಅವರ ಭದ್ರತೆಯ ಬಗ್ಗೆ ನಿರ್ಲಕ್ಷ್ಯ ತೋರಿದೆ ಎಂದು ದೂರಿದರು.
ಚಿಂತಕರಾದ ಪ್ರೊ. ಎಂ.ಎಂ ಕಲಬುರ್ಗಿ, ನರೇಂದ್ರ ದಾಬೋಲ್ಕರ್ ಅವರ ಬಳಿಕ ಗೌರಿ ಲಂಕೇಶ್ ಅವರದ್ದು ಮೂರನೇ ಹತ್ಯೆಯಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಎಂ.ಎಂ ಕಲಬುರ್ಗಿ ಅವರ ಹತ್ಯೆ ನಡೆದು ಎರಡು ವರ್ಷ ಕಳೆದಿದೆ ಆದರೂ ಈವರೆಗೆ ಅಪರಾಧಿಗಳ ಬಂಧನವಾಗಿಲ್ಲ ಎಂದು ಅವರು ಕಿಡಿಕಾರಿದರು.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಈ ಕೂಡಲೇ ಸಿಬಿಐ ಗೆ ವಹಿಸಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಅವರು ಆಗ್ರಹಿಸಿದರು.
You must be logged in to post a comment Login