ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ ಪ್ರದೇಶದ ಸುತ್ತಮುತ್ತ ಬೆಂಕಿ ಹಚ್ಚದಂತೆ ಮನವಿ

ಉಡುಪಿ ಜುಲೈ 3: ಗ್ಯಾಸ್ ಟ್ಯಾಂಕರ್ ವೊಂದು ರಾಷ್ಟ್ರೀಯ ಹೆದ್ದಾರಿ 66ರ ಉಡುಪಿಯ ಬಲಾಯಿಪಾದೆ ಎಂಬಲ್ಲಿ ಪಲ್ಟಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಈ ಘಟನೆಯಲ್ಲಿ ಟ್ಯಾಂಕರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗ್ಯಾಸ್ ಟ್ಯಾಂಕರ್ ನ್ನು ಯು ಟರ್ನ್ ಮಾಡುವ ಸಂದರ್ಭ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಹೇಳಲಾಗಿದೆ.

ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಮತ್ತು ಪೊಲೀಸರು ದೌಡಾಯಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ 66ರ ಒಂದು ಭಾಗದ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಗ್ಯಾಸ್ ಟ್ಯಾಂಕರ್ ನಿಂದ ಸದ್ಯ ಗ್ಯಾಸ್ ಸೋರಿಕೆ ಇಲ್ಲವೆಂದು ಅಗ್ನಿ ಶಾಮಕ ದಳದವರು ದೃಢಪಡಿಸಿದ್ದಾರೆ.

ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಟ್ಯಾಂಕರ್ ಮೇಲೆತ್ತುವ ತನಕ ಸಾರ್ವಜನಿಕರು ಟ್ಯಾಂಕರ್ ನಿಂದ ದೂರವಿರಲು ಸೂಚಿಸಲಾಗಿದ್ದು. ಘಟನೆ ನಡೆದ ಸ್ಥಳದ ಅಂಗಡಿಗಳನ್ನು ಮುಚ್ಚಿಸಿದ ಪೊಲೀಸರು ಮೊಬೈಲ್ ಬಳಸದಂತೆ, ಸುತ್ತಮುತ್ತ ಬೆಂಕಿ ಹಚ್ಚದಂತೆ ತಿಳಿಸಿದ್ದಾರೆ.

VIDEO

Facebook Comments

comments