Connect with us

    BELTHANGADI

    ಬೆಳ್ತಂಗಡಿ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಅವಘಡ, ಗ್ಯಾಸ್ ಸೋರಿಕೆ ಪರಿಣಾಮ ಕಟ್ಟೆಚ್ಚರ

    ಬೆಳ್ತಂಗಡಿ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಅವಘಡ, ಗ್ಯಾಸ್ ಸೋರಿಕೆ ಪರಿಣಾಮ ಕಟ್ಟೆಚ್ಚರ

    ಬೆಳ್ತಂಗಡಿ, ಮಾರ್ಚ್ 09 : ಅನಿಲ ಸಾಗಾಟದ ಗ್ಯಾಸ್ ಟ್ಯಾಂಕರೊಂದು ಅಪಘಾತಕ್ಕೀಡಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಣಕಜೆ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.ಪರಿಣಾಮ ಗ್ಯಾಸ್ ಟ್ಯಾಂಕರ್ ನಿಂದ ಗ್ಯಾಸ್ ಸೋರಿಕೆ ಉಂಟಾಗಿದೆ.

    ಟ್ಯಾಂಕರಿನಿಂದ ಗ್ಯಾಸ್ ಸೋರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಚಲಿಸುವ ಎಲ್ಲಾ ವಾಹನಗಳನ್ನು ತಡೆಹಿಡಿಯಲಾಗಿದೆ. ಅಗ್ನಿ ಶಾಮಕ ದಳದ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು ಗ್ಯಾಸ್ ಸೋರಿಕೆ ನಿಯಂತ್ರಣಕ್ಕೆ ಕಾರ್ಯಾಚರಣೆ ಆರಂಭಿಸಿದ್ದಾರೆ.

    ಹೆಚ್ ಪಿ ಸಿ ಎಲ್ ನ ಹಿರಿಯ ಅಧಿಕಾರಿಗಳೂ ಸ್ಥಳಕ್ಕೆ ಧಾವಿಸಿದ್ದಾರೆ.

    ಮುಂಜಾಗೃತಾ ಕ್ರಮವಾಗಿ ಸುತ್ತಮುತ್ತಲ ಗ್ರಾಮದಲ್ಲಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದ್ದು ಕಟ್ಟೆಚ್ಚರ ವಹಿಸಲಾಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply