ಏಕಾಏಕಿ ಓಪನ್ ಆದ ಗ್ಯಾಸ್ ಟ್ಯಾಂಕರ್ ವಾಲ್ ಭಾರೀ ಪ್ರಮಾಣದ ಗ್ಯಾಸ್ ಸೋರಿಕೆ

ಪುತ್ತೂರು ನವೆಂಬರ್ 4: ಗ್ಯಾಸ್ ಟ್ಯಾಂಕರ್ ಒಂದರ ಮೇಲ್ಬಾಗದ ಟ್ಯಾಂಕ್ ವಾಲ್ ತೆರೆದುಕೊಂಡು ಭಾರಿ ಪ್ರಮಾಣದಲ್ಲಿ ಅನಿಲ ಸೋರಿಕೆಯಾದ ಘಟನೆ ಉಪ್ಪಿನಂಗಡಿಯ ಕರ್ವೇಲ್ ಬಳಿ ನಡೆದಿದೆ.

ಮಂಗಳೂರಿನಿಂದ ಹಾಸನ ಕಡೆ ಹೋಗುವ ಟೋಟಲ್ ಗ್ಯಾಸ್ ಕಂಪನಿಯ ಅನಿಲ ಟ್ಯಾಂಕರ್ ಇದಾಗಿದ್ದು, ಕರ್ವೇಲ್ ಬಳಿ ಬೆಳಗ್ಗೆ 8 ರ ಸುಮಾರಿಗೆ ಗ್ಯಾಸ್ ಟ್ಯಾಂಕರ್ ನ ಮೇಲ್ಬಾಗ ಒಂದು ವಾಲ್ ಏಕಾಏಕಿ ತೆರೆದುಕೊಂಡಿದೆ.

ಘಟನೆ ನಡೆದ ಕೂಡಲೇ ಸ್ಥಳೀಯ ಕರ್ವೇಲ್ ಮಸೀದಿಯಿಂದ ಮೈಕ್ ಅನೌನ್ಸ್ ಮಾಡಿ ಪರಿಸರದಲ್ಲಿ ಬೆಂಕಿ ಉರಿಸದಂತೆ ಮುನ್ನೆಚ್ಚರಿಕೆ ನೀಡಲಾಯಿತ್ತಲ್ಲದೆ, ಪರಿಸರದ ಮನೆಯವರನ್ನು ಸ್ಥಳಾಂತರಗೊಳಿಸಲಾಯಿತು. ಇಕ್ಕೆಲಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಯಿತು. ಸುದ್ದಿ ತಿಳಿದು ಉಪ್ಪಿನಂಗಡಿ ಪೊಲೀಸರು, ತುರ್ತು ಅನಿಲ ಸೋರಿಕೆ ಕಾರ್ಯಾಚರಣೆ ದಳದವರು ಸ್ಥಳಕ್ಕೆ ಧಾವಿಸಿದ್ದು, ಸುಮಾರು ಒಂದೂವರೆ ಗಂಟೆಗಳ ಶ್ರಮದ ಬಳಿಕ ಗ್ಯಾಸ್ ಸೋರಿಕೆಯನ್ನು ತಡೆಗಟ್ಟಿದರು.