LATEST NEWS
ಮಂಗಳೂರಿನಲ್ಲಿ ವಿಧ್ಯಾರ್ಥಿಗಳಿಗೆ ಗಾಂಜಾ ದೀಪಾವಳಿ ಆಫರ್ – 5 ಪ್ಯಾಕೇಟ್ ಗೆ 1 ಪ್ಯಾಕ್ ಗಾಂಜಾ ಫ್ರೀ
ಮಂಗಳೂರಿನಲ್ಲಿ ವಿಧ್ಯಾರ್ಥಿಗಳಿಗೆ ಗಾಂಜಾ ದೀಪಾವಳಿ ಆಫರ್ – 5 ಪ್ಯಾಕೇಟ್ ಗೆ 1 ಪ್ಯಾಕ್ ಗಾಂಜಾ ಫ್ರೀ
ಮಂಗಳೂರು ಅಕ್ಟೋಬರ್ 24: ಗಾಂಜಾ ಮಾರಾಟ ಮಾಡುತ್ತಿದ್ದ ಕಾಲೇಜು ವಿಧ್ಯಾರ್ಥಿಗಳನ್ನು ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ನಗರದ ಬಲ್ಮಠದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಪಡೆದ ರೌಡಿ ನಿಗ್ರಹದಳದ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜು ವಿಧ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ 3 ಮಂದಿ ಯುವಕರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ವಿಚಾರಣೆ ವೇಳೆ ಅಘಾತಕಾರಿ ಸಂಗತಿ ಬೆಳಕಿಗೆ ಬಂದಿದ್ದು, ಗಾಂಜಾ ಮಾರಾಟ ಮಾಡುತ್ತಿದ್ದ ಯುವಕರೂ ಕಾಲೇಜು ವಿಧ್ಯಾರ್ಥಿಗಳಾಗಿದ್ದಾರೆ. ಈ ಮೂವರು ನಗರದ ಪ್ರತಿಷ್ಠಿತ ಪಾಂಡೇಶ್ವರದ ಶ್ರೀನಿವಾಸ ಕಾಲೇಜಿನ ಇಂಟಿರೀಯರ್ ಡಿಸೈನ್ ವಿಭಾಗ ಮೂರನೇ ವರ್ಷದ ವಿಧ್ಯಾರ್ಥಿಗಳಾಗಿದ್ದು ಬಂಧಿತರನ್ನು ಶಹೀನ್ ಕೆ ಅಯೂಬ್, ಶೆಹನ್ ಬಶೀರ್ ಹಾಗೂ ಸಚಿನ್ ಪ್ರದೀಪನ್ ಎಂದು ಗುರುತಿಸಲಾಗಿದೆ.
ನಗರದ ಬಲ್ಮಠ ಆರ್ಯ ಸಮಾಜ ರಸ್ತೆಯಲ್ಲಿರುವ ಬೆಲ್ವಿನ್ ಎಂಬವರ ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ ಕೊಠಡಿಯಲ್ಲಿ ಗಾಂಜಾ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ಪಡೆದ ರೌಡಿ ನಿಗ್ರಹದಳದ ಪೊಲೀಸರು ದಾಳಿ ನಡೆಸಿದ್ದರು.
ಗಾಂಜಾಗೆ ಆಫರ್ ನೀಡಿದ ಖದೀಮ
ಬಂಧಿತರಿಂದ 12 ಪ್ಯಾಕೇಟ್ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು ಈ ವಿಧ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ವ್ಯಕ್ತಿ ಈಶ್ವರನ್ ಎಂದು ಈ ಸಂದರ್ಭದಲ್ಲಿ ಬಂಧಿತ ವಿಧ್ಯಾರ್ಥಿಗಳು ತಿಳಿಸಿದ್ದು , ಈ ವಿಧ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ಈಶ್ವರನ್ ಆಫರ್ ನೀಡುತ್ತಿದ್ದ ಎಂದು ಹೇಳಲಾಗಿದ್ದು, 50 ಗ್ರಾಂ ತೂಕದ 5 ಪ್ಯಾಕೇಟ್ ಮಾರಿದರೆ 1 ಪ್ಯಾಕೆಟ್ ಪ್ರೀಯಾಗಿ ಈಶ್ವರನ್ ನೀಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
You must be logged in to post a comment Login