Connect with us

LATEST NEWS

ಗಾಂಜಾ ಮಾರಾಟಕ್ಕೆ ಯತ್ನ ಮೂವರು ಆರೋಪಿಗಳ ಬಂಧನ

ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನಿನ್ನೆ ಗಾಂಜಾ ಮಾರಾಟಗಾರರು, ಗಾಂಜಾ ಸೇವನೆ ಮಾಡುವವರಿಗೆ ಪರೇಡ್ ನಡೆಸಿರುವ ಬೆನ್ನಲ್ಲೇ ಮೂವರು ಡ್ರಗ್ ಪೆಡ್ಲರ್ ಗಳನ್ನು ಮಂಗಳೂರು ಇಕನಾಮಿಕ್ಸ್, ನಾರ್ಕೋಟಿಕ್ ಆ್ಯಂಡ್ ಕ್ರೈಂ ಪೊಲೀಸರು ರಾಷ್ಟ್ರೀಯ ಹೆದ್ದಾರಿ 66ರ ಕದ್ರಿ ಪದುವಾ ಬಳಿಯಲ್ಲಿ ಬಂಧಿಸಿ 2.50 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.


ಬಂಧಿತರನ್ನು ಸಂತೋಷ್, ದಿಲೀಪ್ ನಾಗರಾವ್ ,ಇಮ್ರಾನ್ ಜುಬೈರ್ ಎಂದು ಗುರುತಿಸಲಾಗಿದ್ದು ಆರೋಪಿಗಳು ಗಾಂಜಾವನ್ನು ಮಂಗಳೂರಿನ ಕಾಲೇಜು ವಿಧ್ಯಾರ್ಥಿಗಳಿಗೆ ಮಾರಾಟ ಮಾಡಲು ಯತ್ನಿಸಿದ್ದರು.

ಬಂಧಿತರಿಂದ 75 ಸಾವಿರ ರೂ. ಮೌಲ್ಯದ 2.50 ಕೆಜಿ ಗಾಂಜಾ, ಒಂದು ಆ್ಯಕ್ಟಿವಾ ಹೋಂಡಾ ವಾಹನ, 3 ಮೊಬೈಲ್ ಫೋನ್ ಗಳು ಹಾಗೂ 1,030 ರೂ. ನಗದು ವಶಪಡಿಕೊಳ್ಳಲಾಗಿದೆ‌. ಸ್ವಾಧೀನಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 1,17,530 ರೂ. ಎಂದು ಅಂದಾಜಿಸಲಾಗಿದೆ.