Connect with us

BANTWAL

ಗಾಂಜಾ ಮಾರಾಟಕ್ಕೆ ಯತ್ನ – ಆರೋಪಿ ಅರೆಸ್ಟ್

ಬಂಟ್ವಾಳ ಜುಲೈ 19: ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದು, ಬಂಧಿತನಿಂದ 30 ಸಾವಿರ ರೂಪಾಯಿ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಸಜಿಪಮೂಡ ಗ್ರಾಮದ ಸುಭಾಶ್ ನಗರ ನಿವಾಸಿ ಇಲಿಯಾಸ್ @ಎಲಿಯಾಸ್ (36) ಎಂದು ಗುರುತಿಸಲಾಗಿದೆ.

ಬಂಟ್ವಾಳ ನಗರ ಪೊಲೀಸ್ ಠಾಣಾ ಎಸ್. ಐ. ಅವಿನಾಶ್ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ದೊರೆತ ಮಾಹಿತಿಯಂತೆ ಮುಡಿಪು ಕಡೆಯಿಂದ ಮೆಲ್ಕಾರ್ ಕಡೆಗೆ ವ್ಯಕ್ತಿಯೋರ್ವರು ಮೋಟಾರ್ ಸೈಕಲ್ ಒಂದರಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿ ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಸಜಿಪಮುನ್ನೂರು ಗ್ರಾಮದ, ಕಂದೂರು ಎಂಬಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದು ಈ ವೇಳೆ ಆರೋಪಿ ಪೋಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

 

ಮುಡಿಪುವಿನಿಂದ ಬಿಸಿರೋಡು ಕಡೆಗೆ ಮಾರಾಟದ ಉದ್ದೇಶದಿಂದ ಮಾದಕ ವಸ್ತು ಗಾಂಜವನ್ನು ಆರೋಪಿ ಇಲಿಯಾಸ್ ಕಿಸೆಯಲ್ಲಿ ಮತ್ತು ಮೋಟಾರ್ ಸೈಕಲ್ ನ ಸೀಟಿನ ಅಡಿಯ ಬಾಕ್ಸ್ ನಲ್ಲಿ ಗಾಂಜಾ ತುಂಬಿದ ಪ್ಲಾಸ್ಟಿಕ್ ತೊಟ್ಠೆಯಲ್ಲಿಟ್ಟುಕೊಂಡಿರುವ ವಿಚಾರ ಆತ ತಿಳಿಸಿದ್ದಾನೆ.