Connect with us

LATEST NEWS

ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ – ಇಬ್ಬರ ಆರೆಸ್ಟ್

ಮಂಗಳೂರು ನವೆಂಬರ್ 11: ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ, ಬಂಧಿತರನ್ನು ಅನ್ಸಾರಿ ಕ್ರಾಸ್ ರೋಡ್‌ ನಿವಾಸಿ ಟಿ.ಪಿ ಫಾರೂಕ್‌ ಹಾಗೂ ನೇಪಾಳದ ಸಾಗರ್‌ ಸಿಂಗ್‌ ಎಂದು ಗುರುತಿಸಲಾಗಿದೆ.


ಆರೋಪಿಗಳು ನವೆಂಬರ್ 10 ರಂದು ಬಿ.ಸಿ ರೋಡ್‌ನಿಂದ ಮಾಣಿ ಮಾರ್ಗದಲ್ಲಿ ಗಿರಾಕಿಗಳಿಗೆ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಡಿ.ಸಿ.ಐ.ಬಿ ಪೊಲೀಸ್‌ ನಿರೀಕ್ಷಕ ಚೆಲುವರಾಜು ಅವರಿಗೆ ಮಾಹಿತಿ ಬಂದ ಹಿನ್ನಲೆ ಕಾರ್ಯಾಚರಣೆ ನಡೆಸಿ ಮೆಲ್ಕಾರ್‍ ಬಸ್ಸು ನಿಲ್ದಾಣದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 10,32,900 ರೂ ಮೌಲ್ಯದ 1.480 ಕಿ.ಗ್ರಾಂ ಗಾಂಜಾವನ್ನು ಹಾಗೂ ಮಾರುತಿ ಬ್ರೀಝಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಹಾಗೂ ಸೊತ್ತುಗಳನ್ನು ಬಂಟ್ವಾಳ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ.