LATEST NEWS
ಮಂಗಳೂರು – ರೌಡಿಗಳ ಗ್ಯಾಂಗ್ ವಾರ್ ಓರ್ವ ಗಂಭೀರ
ಮಂಗಳೂರು ನವೆಂಬರ್ 30: ಮಂಗಳೂರಿನಲ್ಲಿ ಮತ್ತೆ ಗ್ಯಾಂಗ್ ವಾರ್ ಆರಂಭವಾಗಿದೆ. ಹಳೆಯ ಕೊಲೆಯೊಂದರ ವೈಷಮ್ಯದ ಹಿನ್ನೆಲೆಯಲ್ಲಿ ಗ್ಯಾಂಗ್ ವಾರ್ ನಡೆದಿದೆ. ಮಾರಕಾಸ್ತ್ರಗಳಿಂದ ತಂಡವೊಂದು ದಾಳಿ ನಡೆಸಿರುವ ಪರಿಣಾಮ ಯುವಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಗೊಂಡ ಯುವಕನನ್ನು ಶ್ರವಣ್ ಎಂದು ಗುರುತಿಸಲಾಗಿದೆ.
ಎಂಟು ಜನರ ತಂಡವೊಂದು ಮಾರಾಕಾಸ್ತ್ರಗಳಿಂದ ಯುವಕನ ಮೇಲೆ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಗುಂಪುಗಳ ನಡುವಿನ ಹಳೆ ದ್ವೇಷದಿಂದ ಈ ಕೃತ್ಯ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2020ರಲ್ಲಿ ಬರ್ಕೆಯಲ್ಲಿ ನಡೆದ ಇಂದ್ರಜಿತ್ ಕೊಲೆ ಪ್ರಕರಣ ನಡೆದಿತ್ತು. ಗಾಯಗೊಂಡ ಶ್ರವಣ್ ಇಂದ್ರಜಿತ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಸಹೋದರ. ಇಂದ್ರಜಿತ್ ಕೊಲೆಗೆ ಪ್ರತೀಕಾರವಾಗಿ ಈ ಕೊಲೆಯತ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸುಮಾರು 8 ಮಂದಿಯ ತಂಡವೊಂದು ಈ ದುಷ್ಕೃತ್ಯ ಎಸಗಿದೆ. ಗಾಯಾಳು ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರಂಭದಲ್ಲಿ ಇದೊಂದು ಕೊಲೆಯತ್ನ ಎಂದು ಭಾವಿಸಲಾಗಿತ್ತು. ಆದರೆ ಈಗ ಗ್ಯಾಂಗ್ ವಾರ್ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ.ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ
You must be logged in to post a comment Login