ಮಂಗಳೂರು ಅಗಸ್ಟ್ 27: ವಿಶ್ವದೆಲ್ಲೆಡೆ ಇಂದು ಗಣೇಶ ಚತುರ್ಥಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದ್ದು, ಎಲ್ಲೆಡೆ ವಿಘ್ನವಿನಾಶಕನ ಮೂರ್ತಿ ಪ್ರತಿಷ್ಟಾಪನೆ ಹಾಗೂ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ಮಂಗಳೂರಿನಲ್ಲೂ ಹಲವು ಕಡೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಟಾಪಿಸಿ, ಆರಾಧಿಸಲಾಗುತ್ತಿದೆ.

ಮಂಗಳೂರಿನ ನೆಹರೂ ಮೈದಾನ, ಸಂಘನಿಕೇತನ ಸೇರಿದಂತೆ ಹೆಚ್ಚಿನ ಕಡೆಗಳಲ್ಲಿ ಮೂರು, ಐದು ಹಾಗೂ ಏಳು ದಿನಗಳ ಕಾಲ ಪೂಜಿಸಿ ಬಳಿಕ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ. ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನ ಸಿದ್ಧಿ ವಿನಾಯಕ ಪ್ರತಿಷ್ಟಾಪನ ಸಮಿತಿ ವತಿಯಿಂದ 19 ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಗುತ್ತಿದ್ದು, ಇಂದು ಗಣೇಶನಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

ಇದೇ ಸಂದರ್ಭದಲ್ಲಿ ತೆನೆಹಬ್ಬವನ್ನೂ ಇಲ್ಲಿ ಆಚರಿಸಲಾಗುತ್ತಿದ್ದು, ಬಂದ ಭಕ್ತಾಧಿಗಳಿಗೆ ತೆನೆಯನ್ನು ವಿತರಿಸುವ ವ್ಯವಸ್ಥೆಯನ್ನೂ ಮಾಡಲಾಗಿತ್ತು.