KARNATAKA
ಗದಗ : ಬಸ್-ಕಾರು ಮಧ್ಯೆ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರ ದಾರುಣ ಮೃತ್ಯು..!
ಗದಗ, ಆಗಸ್ಟ್ 18 : ಕರ್ನಾಟಕ ಸಾರಿಗೆ ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ನರಗುಂದ ತಾ. ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಸಂಭವಿಸಿದೆ.
ಹಾವೇರಿ ಮೂಲದ ರುದ್ರಪ್ಪ ಅಂಗಡಿ(55),ಪತ್ನಿ ರಾಜೇಶ್ವರಿ (45),ಮಗಳು ಐಶ್ವರ್ಯ (16),ಮಗ ವಿಜಯ(12) ಮೃತರು. ಮೃತರು ಕಲ್ಲಾಪೂರ ಬಸವೇಶ್ವರ ದೇವಸ್ಥಾನಕ್ಕೆ ಕಾರಿನಲ್ಲಿ ಹೊರಟಿದ್ದವರು ಎನ್ನಲಾಗಿದೆ. ಇಳಕಲ್ ನಿಂದ ಹುಬ್ಬಳ್ಳಿ ಗೆ ಸಾರಿಗೆ ಬಸ್ ಹೊರಟಿತ್ತು. ಅದೇ ರೀತಿ ಕಲ್ಲಾಪೂರ ಕಡೆಗೆ ಹೊರಟಿದ್ದ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login