ಹಾಸಿಗೆ ಹಿಡಿದಿದ್ದ ತನ್ನ ಸ್ನೇಹಿತೆಗೆ ಆರ್ಥಿಕ ನೆರವು ನೀಡಲು ಬಂದಿದ್ದ ಮಹಿಳೆಯೊಬ್ಬರು ಸ್ನೇಹಿತೆಯ ಸಂಕಷ್ಟವನ್ನು ಕಂಡು ಕುಸಿದು ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಕೇರಳ ರಾಜ್ಯದ ಅಲೆಪ್ಪಿ ಜಿಲ್ಲೆಯ ಕಾಯಂಕುಲಂದಲ್ಲಿ ನಡೆದಿದೆ.
ಅಲೆಪ್ಪಿ ( ಕೇರಳ) : ಹಾಸಿಗೆ ಹಿಡಿದಿದ್ದ ತನ್ನ ಸ್ನೇಹಿತೆಗೆ ಆರ್ಥಿಕ ನೆರವು ನೀಡಲು ಬಂದಿದ್ದ ಮಹಿಳೆಯೊಬ್ಬರು ಸ್ನೇಹಿತೆಯ ಸಂಕಷ್ಟವನ್ನು ಕಂಡು ಕುಸಿದು ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಕೇರಳ ರಾಜ್ಯದ ಅಲೆಪ್ಪಿ ಜಿಲ್ಲೆಯ ಕಾಯಂಕುಲಂದಲ್ಲಿ ನಡೆದಿದೆ.

ಖಾದಿಜಾಕುಟ್ಟಿ (49) ದಾರುಣ ಅಂತ್ಯ ಕಂಡ ಮಹಿಳೆಯಾಗಿದ್ದಾಳೆ. ಇದಾದ ಕೆಲವೇ ಗಂಟೆಗಳಲ್ಲಿ, ಅವರ ಸ್ನೇಹಿತೆಯೂ ಇಹಲೋಕ ತ್ಯಜಿಸಿದ್ದಾರೆ.
ಶುಕ್ರವಾರ ರಾತ್ರಿ ಆಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಕಾಯಂಕುಲಂನ ಕೃಷ್ಣಪುರಂನ ಶಾಜಹಾನ್ ಅವರ ಪತ್ನಿ ಮತ್ತು ಎಲ್ಐಸಿ ಏಜೆಂಟ್ ಆಗಿದ್ದ ಖಾದಿಜಾಕುಟ್ಟಿ ಮತ್ತು ಆಕೆಯ ಸ್ನೇಹಿತೆ ಶ್ಯಾಮಲಾ ಕುಮಾರಿ (50) ಮೃತ ದುರ್ದೈವಿಗಳಾಗಿದ್ದಾರೆ.
ಇಬ್ಬರೂ ಮಹಿಳೆಯರು ಕಾಯಂಕುಲಂನ ಎಂಎಸ್‌ಎಂ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದರು ಮತ್ತು ಅವರ ಬ್ಯಾಚ್ ಸದಸ್ಯರು ಕ್ಯಾನ್ಸರ್‌ಗೆ ದೀರ್ಘಕಾಲ ಚಿಕಿತ್ಸೆ ಪಡೆಯುತ್ತಿದ್ದ ಕಂದಲ್ಲೂರಿನ ದಿವಂಗತ ಶ್ರೀಕುಮಾರ್ ಅವರ ಪತ್ನಿ ಶ್ಯಾಮಲಾ ಕುಮಾರಿ (50) ಅವರ ಚಿಕಿತ್ಸೆಗೆ ಸಹಾಯ ಮಾಡಲು ನಿರ್ಧಾರ ಮಾಡಿ ಹಣವನ್ನು ಸಂಗ್ರಹಿಸಿದ್ದರು. ಖದೀಜಕುಟ್ಟಿ ಮತ್ತು ಇತರ ನಾಲ್ವರು ಸಹಪಾಠಿಗಳು ಸಂಗ್ರಹಿಸಿದ್ದ ಮೊತ್ತವನ್ನು ಹಸ್ತಾಂತರಿಸಲು ಆಸ್ಪತ್ರೆಗೆ ಬಂದಿದ್ದರು. ಶ್ಯಾಮಲಾ ಅವರನ್ನು ವಾರ್ಡ್‌ನಲ್ಲಿ ಭೇಟಿಯಾಗಿ ಅವರ ಸಂಬಂಧಿಕರಿಗೆ ಹಣವನ್ನು ನೀಡಿದ ನಂತರ, ಖದೀಜಕುಟ್ಟಿ ಹೊರಗೆ ನಡೆದುಕೊಂಡು ಹೋಗುವಾಗ ಕುಸಿದು ಬಿದ್ದರು. ಅವರನ್ನು ತಕ್ಷಣ ಐಸಿಯುಗೆ ಕರೆದೊಯ್ದು ಚಿಕಿತ್ಸೆ ನೀಡಿದರೂ ಫಲ ನೀಡದೆ ಸಂಜೆ 4.30 ಕ್ಕೆ ಅವರು ನಿಧನರಾದರು. ಇತ್ತ ಸ್ನೇಹಿತೆ ಶ್ಯಾಮಲಾ ಕೂಡಾ ಅದೇ ರಾತ್ರಿ 8.30 ಕ್ಕೆ ಇಹಲೋಕ ತ್ಯಜಿಸಿದ್ದರು.
ಇಬ್ಬರು ಸ್ನೆಹಿತೆಯರ ಈ ಹಠಾತ್ ಸಾವುಗಳು ಅವರ ಪೂರ್ವ-ಪದವಿ ಹಳೆಯ ವಿದ್ಯಾರ್ಥಿಗಳ ಗುಂಪಿನ “ಸ್ನೇಹತೀರಂ” ಬಳಗ ಸಹಪಾಠಿಗಳನ್ನು ಅಕ್ಷರಶಃ ದುಃಖದ ಮಡುವಿನಲ್ಲಿ ಮುಳುಗಿಸಿದ್ದಾರೆ.



