LATEST NEWS
ಮಧುರೈ – ಫ್ರೀಡ್ಜ್ ಸ್ಪೋಟಗೊಂಡು ಇಬ್ಬರು ವಿಧ್ಯಾರ್ಥಿನಿಯರು ಸಾವು
ಮಧುರೈ ಸೆಪ್ಟೆಂಬರ್ 12: ಮಹಿಳಾ ಹಾಸ್ಟೆಲ್ ನಲ್ಲಿ ಫ್ರಿಡ್ಜ್ ಸ್ಪೋಟಗೊಂಡ ಪರಿಣಾಮ ಇಬ್ಬರು ವಿಧ್ಯಾರ್ಥಿನಿಯರು ಸಾವನಪ್ಪಿದ ಘಟನೆ ಮಧುರೈನ ಪೆರಿಯಾರ್ ಬಸ್ ನಿಲ್ದಾಣದ ಬಳಿಯ ಖಾಸಗಿ ಮಹಿಳಾ ಹಾಸ್ಟೆಲ್ ನಲ್ಲಿ ನಡೆದಿದೆ.
ಮೃತರನ್ನು ಪರಿಮಳಾ ಹಾಗೂ ಶರಣ್ಯಾ ಎಂದು ಗುರುತಿಸಲಾಗಿದೆ. ಘಟನೆಯು ಗುರುವಾರ ಮುಂಜಾನೆ ನಡೆದಿದೆ. ಸ್ಫೋಟದ ಬೀಕರತೆಗೆ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡು, ಹೊಗೆ ಆವರಿಸಿತ್ತು. ಒಳಗಿದ್ದವರನ್ನು ರಕ್ಷಿಸಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಮಧುರೈ ಜಿಲ್ಲಾಧಿಕಾರಿ ಎಂ.ಎಸ್. ಸಂಗೀತಾ ತಿಳಿಸಿದ್ದಾರೆ. ಮಧುರೈ ಪೆರಿಯಾರ್ ಬಸ್ ನಿಲ್ದಾಣದ ಬಳಿಯ ಕತ್ರಾ ಪಾಳಯಂ ಪ್ರದೇಶದಲ್ಲಿ ವಿಶಾಖ ಮಹಿಳಾ ಹಾಸ್ಟೆಲ್ ಕಾರ್ಯನಿರ್ವಹಿಸುತ್ತಿತ್ತು. ಈ ಹಾಸ್ಟೆಲ್‌ನಲ್ಲಿ 50ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥ ಮಹಿಳೆಯರು ತಂಗಿದ್ದರು.
ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಹಾಸ್ಟೆಲ್‌ನಲ್ಲಿದ್ದ ಮಹಿಳೆಯರು ಚೀರಾಡುತ್ತಾ ಹೊರಗೆ ಓಡಿ ಬಂದಿದ್ದಾರೆ. ಆದರೆ ಪ್ರಿಡ್ಜ್ ಸ್ಫೋಟಗೊಂಡ ಕೊಠಡಿಯಲ್ಲಿ ತಂಗಿದ್ದ ಪರಿಮಳಸುಂದರಿ (50) ಹಾಗೂ ಶರಣ್ಯ (22) ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಟ್ಟಡ ಹಳೆಯದಾಗಿದ್ದು, ಶಿಥಿಲಗೊಂಡಿತ್ತು. ಕಟ್ಟಡ ನೆಲಸಮಗೊಳಿಸಲು ಸ್ಥಳೀಯ ಸಂಸ್ಥೆ ನೋಟಿಸ್ ನೀಡಿತ್ತು. ಈ ಪ್ರಕರಣ ನ್ಯಾಯಾಲಯದಲ್ಲಿದೆ. ದಾಖಲೆಗಳನ್ನು ಪರಿಶೀಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.
You must be logged in to post a comment Login