ಸರ ಕಳ್ಳಿಯರನ್ನು ಬಂಧಿಸಿದ ಮೂಲ್ಕಿ ಪೊಲೀಸರು

ಮಂಗಳೂರು, ಫೆಬ್ರವರಿ 18 : ಸರಕಳ್ಳತನ ಮಾಡುತ್ತಿದ್ದ ನಾಲ್ಕು ಮಂದಿ ಕಳ್ಳಿಯರನ್ನು ಮಂಗಳೂರಿನ ಮೂಲ್ಕಿ ಪೋಲೀಸರು ಬಂಧಿಸಿದ್ದಾರೆ,

ಬಂಧಿತರನ್ನು ತಮಿಳುನಾಡು ಮೂಲದ ಸೋಡಲಾ(30), ಹರಿಣಿ(29), ರೋಹಿಣಿ (30)ದಿವ್ಯ (23) ಎಂದು ಗುರುತಿಸಲಾಗಿದೆ.

ಬಂಧಿತರಿಂದ 50000 ಮೌಲ್ಯದ 3 ಪವನ್ ತೂಕದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.

ಭಾನುವಾರ ಬಂಧಿತರು ಪಕ್ಷಿಕೆರೆ ಚರ್ಚ್ ಬಳಿ ರತ್ನಾ ಎಂಬ ಮಹಿಳೆಯ ಮೂರು ಪವನ್ ಚಿನ್ನದ ಸರವನ್ನು ಕಸಿದುಕೊಂಡು ಹೋಗಿದ್ದು ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಮೇಲೆ ಈಗಾಗಲೇ ಕಾವೂರು, ಮಂಗಳೂರು ಉತ್ತರ, ಬೆಂಗಳೂರಿನ ಸದಾಶಿವನಗರ ಠಾಣೆಗಳಲ್ಲಿ ಇವರ ಮೇಲೆ ಸರ ಸುಲಿಗೆ ಪ್ರಕರಣ ದಾಖಲಾಗಿದ್ದು,

ಕಾವೂರು ಠಾಣೆಯಲ್ಲಿ 2008 ರ ಸರ ಸುಲಿಗೆ ಪ್ರಕರಣದ ಬಗ್ಗೆ ಕಳೆದ 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುತ್ತಾರೆ.

Facebook Comments

comments