Connect with us

    LATEST NEWS

    ಮಾಜಿ ಡಾನ್ ಮುತ್ತಪ್ಪ ರೈ ಆರೋಗ್ಯದಲ್ಲಿ ಏರುಪೇರು ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲು

    ಮಾಜಿ ಡಾನ್ ಮುತ್ತಪ್ಪ ರೈ ಆರೋಗ್ಯದಲ್ಲಿ ಏರುಪೇರು ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲು

    ಮಂಗಳೂರು ಅಗಸ್ಟ್ 25: ಮಾಜಿ ಡಾನ್ ಸದ್ಯದ ರಿಯಲ್ ಎಸ್ಟೇಟ್ ಉದ್ಯಮಿ ಮುತಪ್ಪ ರೈ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮುತ್ತಪ್ಪ ರೈ ಅವರಿಗೆ ತೀವ್ರ ಅನಾರೋಗ್ಯದ ಹಿನ್ನಲೆಯಲ್ಲಿ ಏಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ. ಆದರೆ ರೈ ಅವರ ಆರೋಗ್ಯದ ಏರುಪೇರಿಗೆ ಕಾರಣವೇನೆಂದು ಅವರು ಬಹಿರಂಗಪಡಿಸಿಲ್ಲ.

    ಕಳೆದ ವರ್ಷ ಆಯುಧ ಪೂಜೆಯ ವೇಳೆ ತಮ್ಮ ಮನೆಯಲ್ಲಿನ ಶಸ್ತ್ರಾಸ್ತ್ರ ಸಂಗ್ರಹದಲ್ಲಿ ಪೂಜೆ ನಡೆಸುತ್ತಿರುವ ರೈ ಅವರ ವೀಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡಿತ್ತು. ಇದಕ್ಕೆ ಸಂಬಂಧಿಸಿ ರೈ 2018 ರಲ್ಲಿ ಬೆಂಗಳೂರಿನ ಸಂಘಟಿತ ಅಪರಾಧ ವಿಭಾಗದ ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದರು.

    ದಕ್ಷಿಣ ಕನ್ನಡ ಜಿಲ್ಲೆಯವರಾದ ಮುತ್ತಪ್ಪ ರೈ ಹಿಂದೊಮ್ಮೆ ಭೂಗತ ಸಾಮ್ರಾಜ್ಯದ ದೊರೆಯಾಗಿ ಮೆರೆದಿದ್ದರು. ಕೆಲ ವರ್ಷಗಳ ಹಿಂದೆ ಪುತ್ತೂರು ಮಹಾಲಿಂಗೇಶ್ವರ ದೇವರಿಗೆ ಹೊಸದಾಗಿ ರಥವನ್ನು ಮಾಡಿಸಿಕೊಟ್ಟಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply