Connect with us

LATEST NEWS

ಬಾವಿಗೆ ಬಿದ್ದ ಜಿಂಕೆಯನ್ನು ರಕ್ಷಿಸಿದ ಅರಣ್ಯ ಇಲಾಖೆ

ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಬಾವಿಗೆ ಬಿದ್ದ ಜಿಂಕೆಯೊಂದನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.


ಕುಂದಾಪುರ ತಾಲೂಕಿನ ಕಂದಾವರ ಗ್ರಾಮದ ಹೇರಿಕೇರಿ ಎಂಬಲ್ಲಿ ಈ ಘಟನೆ ನಡೆದಿದೆ. ಅರಣ್ಯದಿಂದ ಆಹಾರ ಅರಸಿ ಹಳ್ಳಿಗೆ ಬಂದ ಜಿಂಕೆ ರಾತ್ರಿ ವೇಳೆ ಓಡುವಾಗ ಸ್ಥಳೀಯ ರಾಜೇಂದ್ರ ಅವರ ಮನೆ ಸಮೀಪದ ತೆರೆದ ಬಾವಿಗೆ ಬಿದ್ದಿದೆ. ಪಾಳು ಬಾವಿಯಲ್ಲಿ ಜಿಂಕೆ ಬಿದ್ದಿದ್ದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಉಪ ಅರಣ್ಯಾಧಿಕಾರಿ ಉದಯ, ಚಾಲಕ ಅಶೋಕ್, ಅರಣ್ಯ ವೀಕ್ಷಕ ಸೋಮಶೇಖರ ಅವರು ಸ್ಥಳೀಯರ ಸಹಕಾರದಿಂದ ಬಾವಿಗೆ ಬಿದ್ದಿದ್ದ ಜಿಂಕೆಯನ್ನು ರಕ್ಷಿಸಿ, ಅರಣ್ಯಕ್ಕೆ ಬಿಟ್ಟಿದ್ದಾರೆ.

Facebook Comments

comments