Connect with us

DAKSHINA KANNADA

ಅರಣ್ಯ ಇಲಾಖೆಯ ದೌರ್ಜನ್ಯ ಆರೋಪ – ಸಂತ್ರಸ್ತ ಕುಟುಂಬದ ಪರ ಮಧ್ಯೆಪ್ರವೇಶಿಸಿದ ಪುತ್ತೂರು ನ್ಯಾಯಾಲಯ

ಪುತ್ತೂರು ಮಾರ್ಚ್ 20: ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಸಂತ್ರಸ್ಥ ಕುಟುಂಬದ ಪರ ನ್ಯಾಯಾಲಯ ಮಧ್ಯ ಪ್ರವೇಶಿಸಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಲು ಪೊಲೀಸ್ ಇಲಾಖೆ ಆದೇಶ ನೀಡಿದೆ.


ಸುಬ್ರಹಣ್ಯ ವಲಯ ರಕ್ಷಿತಾರಣ್ಯದ ಐತ್ತೂರು ಭಾಗದ ಅರಣ್ಯದಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಐತ್ತೂರು ಗ್ರಾಮದ ಮೂಜೂರು ನಿವಾಸಿ ಪ್ರಸಾದ್ ಎನ್ನುವವರು ಸಾಕ್ಷಿ ಸಮೇತ ಸಂಬಂಧಪಟ್ಟ ಇಲಾಖೆ ದೂರು ನೀಡಿದ್ದರು. ಆದರೆ ಅರಣ್ಯ ಇಲಾಖೆ ಅರಣ್ಯ ಸಂಚಾರಿ ದಳದ ಮುಖ್ಯಸ್ಥೆ ಸಂಧ್ಯಾ ನೇತೃತ್ವದ ತಂಡ ದೂರುದಾರನ ಮೇಲೆ ಹಗೆ ಸಾಧಿಸಿ ಮಾರ್ಚ್ 2ರಂದು ರಾತ್ರಿ ಸಂಚಾರಿ ಅರಣ್ಯಾಧಿಕಾರಿಗಳು, ಪೋಲೀಸರು ಹಾಗೂ ಇನ್ನಿತರ ಕೆಲವು ಜನ ಪ್ರಸಾದ್ ಮನೆಗೆ ದಾಳಿ ನಡೆಸಿ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಪೂರಕವೆಂಬಂತೆ ದಾಳಿ ವೇಳೆ ದರ್ಪದಿಂದ ವರ್ತಿಸಿದ ವಿಡಿಯೋ ಕೂಡಾ ವೈರಲ್‌ ಆ ಗಿತ್ತು.


ಈ ಹಿನ್ನಲೆ ಮಧ್ಯರಾತ್ರಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದ ಅರಣ್ಯಾಧಿಕಾರಿ ವಿರುದ್ದ ಪೊಲೀಸ್ ದೂರು ದಾಖಲಿಸಲು ಹಿಂದೇಟು ಹಾಕಿದ ಹಿನ್ನಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸಂತ್ರಸ್ಥ ಕುಟುಂಬಸ್ಥರು ಕಡಬದ ತಹಶಿಲ್ದಾರ್ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು, ಆದರೆ ಇದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು ಮೌನ ವಹಿಸಿದ್ದರು. ಆದರೆ ಇಂದು ರಕ್ತ ಚಳುವಳಿ ನಡೆಸುವ ಪ್ರತಿಭಟನೆಯನ್ನು ತೀವ್ರಗೊಳಿಸಲಾಗಿತ್ತು. ಅಲ್ಲದೆ ಪುತ್ತೂರು ನ್ಯಾಯಾಲದ ಮೊರೆ ಹೊಗಲಾಗಿತ್ತು.


ಈಗ ಸಂತ್ರಸ್ತ ಕುಟುಂಬದ ಪರ ಮಧ್ಯೆಪ್ರವೇಶಿಸಿದ ಪುತ್ತೂರು ನ್ಯಾಯಾಲಯ ಅರಣ್ಯ ಇಲಾಖೆ ವಿರುದ್ಧ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದ ಪೋಲೀಸ್ ಇಲಾಖೆಗೆ ಸಂತ್ರಸ್ತ ಕುಟುಂಬದ ದೂರಿಗೆ ಪ್ರಕರಣ ದಾಖಲಿಸುವಂತೆ ನ್ಯಾಯಾಲಯದ ಆದೇಶಿಸಿದೆ. ನ್ಯಾಯಾಲಯದ ಮಧ್ಯಪ್ರವೇಶದಿಂದ ಗೊಂದಲ ಬಗೆ ಹರಿದಿದೆ.