Connect with us

    LATEST NEWS

    ವಿದೇಶದಿಂದ ಬಂದವರು ಹೊರಗಡೆ ಬಂದರೆ ಕಠಿಣ ಕ್ರಮ – ಉಡುಪಿ ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್

    ವಿದೇಶದಿಂದ ಬಂದವರು ಹೊರಗಡೆ ಬಂದರೆ ಕಠಿಣ ಕ್ರಮ – ಉಡುಪಿ ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್

    ಉಡುಪಿ ಮಾರ್ಚ್ 26: ವಿದೇಶದಿಂದ ಉಡುಪಿ ಆಗಮಿಸಿದ ಎಲ್ಲರೂ ಹೋಮ್ ಕ್ವಾರಂಟೈನ್ ನಲ್ಲೆ ಇರಬೇಕು, ಆದೇಶ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದೆಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಉಡುಪಿಯಲ್ಲಿ ಈ ಕುರಿತಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ವಿದೇಶದಿಂದ ಉಡುಪಿ ಜಿಲ್ಲೆಗೆ ಸುಮಾರು 1000 ಜನರು ಆಗಮಿಸಿದ್ದು, ಅವರನ್ನು ಹೋಮ್ ಕ್ವಾರಂಟೈನ್ ನಲ್ಲಿಡಲಾಗಿದ್ದು, ಜಿಲ್ಲಾಡಳಿತ ಈಗಾಗಲೇ ಎಲ್ಲಾ ಮನೆಗಳಿಗೆ ನೊಟೀಸ್ ಕೂಡ ಅಂಟಿಸಿದ್ದು, ಮನೆಯಿಂದ ಹೊರಗೆ ಬಾರದಂತೆ ವಿನಂತಿಸಲಾಗಿದೆ.

    ಈ ಹಿನ್ನಲೆ ವಿದೇಶದಿಂದ ಬಂದವರು ಹೋಮ್ ಕ್ವಾರಂಟೈನ್ ಮುಗಿಯುವ ತನಕ ಕಟ್ಟುನಿಟ್ಟಾಗಿ ಹೊರಗಡೆ ಬರುವಂತಿಲ್ಲ, ಒಂದು ವೇಳೆ ಕ್ವಾರಂಟೈನ್ ನಲ್ಲಿ ಇರುವವರು ಸುತ್ತಾಡುವುದನ್ನು ಗಮನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply